22 ಫೆಬ್ರವರಿ 2023, ಬೆಳ್ತಂಗಡಿ: ಸನ್ಮಾನದಿಂದ ಜವಾಬ್ದಾರಿ ಹೆಚ್ಚಿದೆ : ಡಾ|| ಮುರಳಿ ಮೋಹನ್ ಚೂಂತಾರು.
“ಹುಟ್ಟೂರಿನಲ್ಲಿ ತಮ್ಮದೇ ಜನರ ನಡುವೆ ಊರಿನ ಹಿರಿಯರೊಂದಿಗೆ ಹಿರಿಯರಿಂದ ಸನ್ಮಾನ ಪಡೆಯುವುದು ಅತ್ಯಂತ ಸೌಭಾಗ್ಯ ಮತ್ತು ಅವಿಸ್ಮರಣೀಯ . ಈ ಸನ್ಮಾನದಿಂದ ಜವಾಬ್ದಾರಿ ಇನ್ನಷ್ಟು ಹೆಚ್ಚಿದೆ, ಮತ್ತಷ್ಟು ಉತ್ಸಾಹ, ಹುಮ್ಮಸ್ಸಿನಿಂದ ಸಮಾಜಮುಖಿ ಕೆಲಸ ಮಾಡಲು ಪ್ರೇರೇಪಣೆ ನೀಡಿದೆ” ಎಂದು ಡಾ|| ಮುರಲೀ ಮೋಹನ್ ಚೂಂತಾರು ನುಡಿದರು.
ವಸಂತ ಶೆಟ್ಟಿ ಬೆಳ್ಳಾರೆಯವರ ಮುಂದಾಳುತ್ವದಲ್ಲಿ ಕಳಂಜ ಗ್ರಾಮದ ತಂಟೆಪ್ಪಾಡಿಯಲ್ಲಿರುವ ನಿನಾದ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ನಾಟಕ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಫೆ. 5ರಂದು ನಡೆಯಿತು. ಸಮಾಜ ಸೇವೆ ಹಾಗೂ ವೈದ್ಯಕೀಯ ಲೇಖನಗಳ ಮೂಲಕ ಜನಜಾಗೃತಿಗೊಳಿಸಿದ್ದಕ್ಕಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, “ವಸಂತ ಶೆಟ್ಟಿ ಬೆಳ್ಳಾರೆ ಅವರ ಸಮರ್ಥ ಮುಂದಾಳತ್ವದಲ್ಲಿ ಸುಳ್ಯ ಮತ್ತು ಬೆಳ್ಳಾರೆ ಪರಿಸರದ ಮಕ್ಕಳ ಪ್ರತಿಭೆಯನ್ನು ನೀರೆರೆದು ಪೋಷಿಸುವ ಕೆಲಸ ನಿನಾದ ಸಂಸ್ಥೆ ತಂಟೆಪ್ಪಾಡಿ ಮಾಡುತ್ತಿದೆ. ಈ ನಿನಾದ ಸಂಸ್ಥೆ ಮುಂದೆ ನೀನಾಸಂ ಸಂಸ್ಥೆಯ ಹಾಗೆ ದೊಡ್ಡ ಮಟ್ಟದಲ್ಲಿ ಬೆಳೆದು ಸಾಂಸ್ಕೃತಿಕ ಲೋಕದ ಮಿನುಗುತಾರೆಯಾಗಲಿ” ಎಂದು ಹಾರೈಸಿದರು. ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ, ಬೆನ್ನು ತಟ್ಟಿ ಪ್ರೋತ್ಸಾಹಿಸುವ ಕೆಲಸ ಶ್ಲ್ಯಾಘನೀಯ” ಎಂದು ಅವರು ನುಡಿದರು. ಇದೇ ಕಾರ್ಯಕ್ರಮದಲ್ಲಿ ಅನರ್ಘ್ಯ ಐ.ಎ.ಎಸ್. ಅಕಾಡೆಮಿ ನವದೆಹಲಿ ಮತ್ತು ಬೆಂಗಳೂರು ಇದರ ಸಂಸ್ಥಾಪಕರಾದ ಮನೋಜ್ ಮಡ್ತಿಲರಿಗೆ ಗೌರವಾರ್ಪಣೆ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ನಿರ್ದೇಶಕ ಮುದ್ದುಕೃಷ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಕಲಾ ಕೇಂದ್ರದ ಅಧ್ಯಕ್ಷ ಐತಪ್ಪ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಸಂತ ಶೆಟ್ಟಿ ಬೆಳ್ಳಾರೆ ಸ್ವಾಗತಿಸಿ, ನಿನಾದ ಉಪಾಧ್ಯಕ್ಷ ವಾಸಪ್ಪ ಶೆಟ್ಟಿ ವಂದಿಸಿ, ಶ್ರೀಮತಿ ವಿನಯ ಶೆಟ್ಟಿ ನಿರೂಪಿಸಿದರು. ಕಾಣಿಯೂರು ಪ್ರಗತಿ ಶಾಲಾ ವಿದ್ಯಾರ್ಥಿಗಳಿಂದ ಮತ್ತು ನಿನಾದ ಸಂಸ್ಕೃತಿಕ ಕಲಾಕೇಂದ್ರದ ಕಲಾವಿದರಿಂದ ಹಾಡು ಮತ್ತು ನೃತ್ಯಗಳ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಕಾಣಿಯೂರು ಪ್ರಗತಿ ಶಾಲಾ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಕಾರ್ಯಕ್ರಮ, ನಿನಾದ ಸಾಂಸ್ಕೃತಿಕ ಕಲಾಕೇಂದ್ರದ ಕಲಾವಿದರಿಂದ “ಸಾಂಸ್ಕೃತಿಕ ಸೌರಭ” ಹಾಗೂ ಕೈವಲ್ಯ ಕಲಾ ಕೇಂದ್ರ ಬೆಂಗಳೂರು ಅಭಿನಯಿಸಿದ ನಾಟಕ “ಮಾಧವಿ” ಇದರ ಪ್ರದರ್ಶನ ನಡೆಯಿತು.
Subscribe to Updates
Get the latest creative news from FooBar about art, design and business.
Previous Articleನಾಡಿನ ಹಿರಿಯ ಸಾಹಿತಿ ಪಂಜೆ ಮಂಗೇಶರಾಯರವರ ಜನ್ಮಸ್ಮರಣೆ