ಮಂಗಳೂರು : ವಿಶ್ವ ಕೊಂಕಣಿ ಕೇಂದ್ರವು ‘ವರ್ಧನಿ’ ಮತ್ತು ‘ಸಾಧನಾ ಬಳಗ’ ಸಹಕಾರದೊಂದಿಗೆ ಆಯೋಜಿಸಿದ ‘ನಿನಾದ’ ಮೂರು ದಿವಸಗಳ ಉಚಿತ ಮಕ್ಕಳ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 27 ಸೆಪ್ಟೆಂಬರ್ 2025ರಂದು ವಿಶ್ವಕೊಂಕಣಿ ಕೇಂದ್ರದಲ್ಲಿ ಜರುಗಿತು.
ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷ ಡಿ. ರಮೇಶ ನಾಯಕ್ ನೆರೆದ ಅತಿಥಿ ಗಣ್ಯರನ್ನು ಸ್ವಾಗತಿಸುತ್ತಾ “ಸಂಗೀತ, ನೃತ್ಯ, ಭಾವಗೀತೆ, ಭಕ್ತಿಗೀತೆ ಹಾಗೂ ವಿವಿಧ ಕೌಶಲ್ಯ ಕಲೆಗಳ ಅಭ್ಯಾಸದಿಂದ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಹಾಯಕವಾಗುದುದು. ಅಲ್ಲದೇ ಮಕ್ಕಳು ಶಿಬಿರದ ಉತ್ತಮ ಪ್ರಯೋಜನ ಪಡೆದು ಶಿಬಿರದಲ್ಲಿ ಕಲಿತ ವಿದ್ಯೆಯನ್ನು ಜೀವನದಲ್ಲಿ ಅಳವಡಿಸಬೇಕು” ಎಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಸ್.ಡಿ.ಎಂ. ಕಾಲೇಜ್ ಆಫ್ ಬಿಸ್ನೆಸ್ ಮ್ಯಾನೇಜ್ ಮೆಂಟ್ ಪ್ರಾಂಶುಪಾಲರಾದ ಪ್ರೊ. ಅರುಣಾ ಕಾಮತ್ ರವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ “ಈಗಿನ ತಂತ್ರಜ್ನಾನ ಯುಗದಲ್ಲಿ ಇಂತಹ ಚಟುವಟಿಕೆ ಆಧಾರಿತ ಶಿಬಿರವು ಮಕ್ಕಳಿಗೆ ಅತೀ ಅಗತ್ಯವಾಗಿದೆ. ಇದರಿಂದ ಮಕ್ಕಳ ಮನೋಸಾಮರ್ಥ್ಯ ಹೆಚ್ಚುವುದಲ್ಲದೇ ಮೊಬೈಲ್ ಬಳಕೆಯಿಂದ ದೂರವಿರಬಹುದೆಂದು ತಿಳಿಸುತ್ತಾ ಶಿಬಿರವನ್ನು ಆಯೋಜಿಸಿದ ವಿಶ್ವ ಕೊಂಕಣಿ ಕೇಂದ್ರವನ್ನು ಶ್ಲಾಘಿಸಿದರು”.
ವಿಶೇಷ ಶಿಬಿರದಲ್ಲಿ ಭಾಗವಹಿಸಿದ ಸುಮಾರು 60 ಶಾಲಾ ಮಕ್ಕಳು ಊಟೋಪಚಾರ, ವಸತಿ ಸೌಲಭ್ಯದೊಂದಿಗೆ ಸಂಗೀತ, ಭಾವಗೀತೆ, ಭಕ್ತಿಗೀತೆ, ನೃತ್ಯ, ಕೋಲಾಟ ಹೀಗೆ ವಿವಿಧ ಕಲೆಯ ತರಬೇತಿ ಪಡೆದರು. ಸಾಧನಾ ಬಳಗದ ಮುಖ್ಯ ತರಬೇತುದಾರ ಪ್ರಕಾಶ್ ಶೆಣೈ ಮಾತನಾಡುತ್ತಾ ಶಿಬಿರವನ್ನು ಆಯೋಜಿಸಿದ ವಿಶ್ವ ಕೊಂಕಣಿ ಕೇಂದ್ರವನ್ನು ಅಭಿನಂದಿಸಿದರು. ಕೇಂದ್ರದ ಆಡಳಿತ ಅಧಿಕಾರಿ ಡಾ. ಬಿ. ದೇವದಾಸ ಪೈ ಮುಖ್ಯ ಅತಿಥಿಗೆ ನೆನಪಿನ ಕಾಣಿಕೆಯಿತ್ತು ಧನ್ಯವಾದ ಸಮರ್ಪಣೆ ಮಾಡಿದರು. ವಿದ್ವಾನ ಯೋಗೀಶ್ ಕಿಣಿ, ನಾಗೇಶ್ ಪ್ರಭು, ವಿದುಷಿ ವೃಂದಾ ನಾಯಕ್, ಭಾವನಾ ಪ್ರಭು, ಕುಡ್ಪಿ ವಿದ್ಯಾ ಶೆಣೈ ವಿವಿಧ ಕೌಶಲ್ಯ ಚಟುವಟಿಕೆಗಳ ತರಬೇತು ನೀಡಿದರು. ವಿಶ್ವ ಕೊಂಕಣಿ ಕೇಂದ್ರದ ಲಕ್ಷ್ಮೀ ಕಿಣಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಪುಟ್ಟ ಪುಟಾಣಿಗಳು ಶಿಬಿರದ ತಮ್ಮ ಅನುಭವವನ್ನು ಹಂಚಿಕೊಂಡರು. ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರವನ್ನು ನೀಡಲಾಯಿತು.