ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇದರ ವತಿಯಿಂದ ನಿರಂಜನ 100 ವರ್ಷದ ನೆನಪಿನ ಉತ್ಸವ ಕಾರ್ಯಕ್ರಮವನ್ನು ದಿನಾಂಕ 22 ಫೆಬ್ರವರಿ 2025ರಂದು ಬೆಳಿಗ್ಗೆ 10-00 ಗಂಟೆಗೆ ಮಂಗಳೂರಿನ ಉರ್ವಸ್ಟೋರ್ ತುಳು ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಇವರು ಉದ್ಘಾಟಿಸಲಿದ್ದಾರೆ. ಬೆಳಿಗ್ಗೆ ಗಂಟೆ 11-45ಕ್ಕೆ ‘ನಿರಂಜನ ಇವರ ಬದುಕು ಬರಹ’ದ ಕುರಿತು ವಿಚಾರಗೋಷ್ಠಿ, ಮಧ್ಯಾಹ್ನ 12-30 ಗಂಟೆಗೆ ರಂಗ ಅಧ್ಯಯನ ಕೇಂದ್ರ ಸಂತ ಅಲೋಶಿಯಸ್ ಪರಿಗಣಿತ ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳಿಂದ ‘ಪದರಂಗಿತ’, 2-00 ಗಂಟೆಗೆ ವಿದ್ಯಾರ್ಥಿ ಗೋಷ್ಠಿಯಲ್ಲಿ ನಿರಂಜನ ಇವರ ಸಾಹಿತ್ಯ ಹೊಸ ತಲೆಮಾರಿನ ದೃಷ್ಠಿಯಿಂದ ಎಂಬ ವಿಷಯದ ಬಗ್ಗೆ ಸಂವಾದ, 3-30 ಗಂಟೆಗೆ ವಿಚಾರಗೋಷ್ಠಿ, 4-30 ಗಂಟೆಗೆ ಮಂಗಳೂರಿನ ಜರ್ನಿ ಥೇಟರ್ ಗ್ರೂಪ್ (ರಿ.) ಇವರಿಂದ ‘ಪದರಂಗಿತ’, ಸಂಜೆ 5-30 ಗಂಟೆಗೆ ಚಿರಸ್ಮರಣೆ ಆಯ್ದ ಭಾಗದ ಪ್ರದರ್ಶನ ಹಾಗೂ 6-00 ಗಂಟೆಗೆ ಮಣಿಪಾಲದ ಸಂಗಮ ನಾಟಕ ಕಲಾವಿದೆರ್ (ರಿ.) ಇವರು ರೋಹಿತ್ ಎಚ್. ಬೈಕಾಡಿ ಇವರ ನಿರ್ದೇಶನದಲ್ಲಿ ತುಳು ಭವನದ ಅಮೃತ ಸೋಮೇಶ್ವರ ಸಭಾಂಗಣದಲ್ಲಿ ‘ಮರಣ ಗೆಂದಿನಾಯೆ’ ತುಳು ನಾಟಕ ಪ್ರದರ್ಶನ ನೀಡಲಿದ್ದಾರೆ.