ಬೆಂಗಳೂರು : ಎಸ್.ವಿ. ನಾರಾಯಣಸ್ವಾಮಿ ರಾವ್ ಸಂಸ್ಥಾಪಿಸಿದ ಶ್ರೀ ರಾಮಸೇವಾ ಮಂಡಳಿ ಟ್ರಸ್ಟ್ (ರಿ.) ಇದರ ವತಿಯಿಂದ ಸುಂದರವಾಗಿ ನಿರ್ಮಾಣಗೊಂಡ ನೂತನ ಸಭಾಂಗಣ “ಎಸ್.ವಿ. ನಾರಾಯಣಸ್ವಾಮಿ ರಾವ್ ಮೆಮೊರಿಯಲ್ ಹಾಲ್’ ಮತ್ತು ಶ್ರೀ ಟಿ. ನಾಗರಾಜು ಅವರ ಲೇಖನಿಯಿಂದ ಮೂಡಿ ಬಂದ ‘ನಿಸ್ವಾರ್ಥ ಬದುಕಿನ ಶ್ರೀ ರಾಮಭಕ್ತ’ ಎಂಬ ಕೃತಿಯು ಲೋಕಾರ್ಪಣೆಗೊಳ್ಳಲಿದೆ. ಕನಕಪುರದ ನೆಟ್ಟಿಗೆರೆ ಗ್ರಾಮದ ಸೋಮನ ಹಳ್ಳಿಯಲ್ಲಿ 30-06-2023ರಂದು ಪೂರ್ವಾಹ್ನ 11-30ಕ್ಕೆ ಸಭಾಂಗಣ ಮತ್ತು ಕೃತಿಯ ಸಮರ್ಪಣಾ ಸಮಾರಂಭವು ಪೇಜಾವರ ಮಠಾದೀಶ ಶ್ರೀ ಶ್ರೀ 1008 ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರ ಪವಿತ್ರ ದೈವಿಕ ಉಪಸ್ಥಿತಿಯಲ್ಲಿ ನಡೆಯಲಿದೆ.
ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್, ಮಾನ್ಯ ಕಂದಾಯ ಸಚಿವರಾದ ಶ್ರೀ ಕೃಷ್ಣ ಬೈರೇ ಗೌಡ, ಶ್ರೀ ಕೆ.ಸಿ. ರಾಮಮೂರ್ತಿ (ಐ.ಪಿ.ಎಸ್.), ಮಾಜಿ ಲೋಕ ಸಭಾ ಸದಸ್ಯರು ಹಾಗೂ ಸಿ.ಎಂ.ಆರ್. ಸಮೂಹ ಸಂಸ್ಥೆಗಳ ಅಧ್ಯಕ್ಷರು ಇವರೆಲ್ಲರೂ ಮುಖ್ಯ ಅತಿಥಿಗಳಾಗಿ ಭಾಗವಹಿಸುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಶವಂತಪುರದ ಶಾಸಕರಾದ ಶ್ರೀ ಎಸ್.ಟಿ. ಸೋಮಶೇಖರ್ ವಹಿಸಲಿದ್ದಾರೆ. ನೆಲಗುಳಿ ಗ್ರಾಮ ಪಂಚಾಯತಿನ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸರ್ವ ಪಂಚಾಯತ್ ಸದಸ್ಯರು ಭಾಗವಹಿಸಲಿದ್ದಾರೆ.
ಜಯತೀರ್ಥ ವಿದ್ಯಾಪೀಠ ಉತ್ತರಾಧಿ ಮಠದ ಆಡಳಿತಾಧಿಕಾರಿಯಾದ ಡಾ. ಸತ್ಯದ್ಯಾನಾಚಾರ್ ಕತ್ತಿ, ಬೆಂಗಳೂರಿನ ಅನನ್ಯ ಕಲ್ಚರಲ್ ಅಕಾಡಮಿಯ ಅಧ್ಯಕ್ಷರಾದ ಡಾ. ಆರ್.ವಿ. ರಾಘವೇಂದ್ರ, ನಿವೃತ್ತ ಪಿ.ಎಸ್. ಅಧಿಕಾರಿಯಾದ ಡಾ. ಸಿ. ಸೋಮಶೇಖರ್, ಗಾನ ಕಲಾ ಭೂಷಣ ವಿದ್ವಾನ್ ಆರ್.ಕೆ. ಪದ್ಮನಾಭ, ವಿದ್ವಾನ್ ಕುಮಾರೇಶ್ ರಾಜಗೋಪಾಲನ್, ಬೆಂಗಳೂರಿನ ಗಾಯನ ಸಮಾಜದ ಅಧ್ಯಕ್ಷರಾದ ಡಾ. ಎಂ.ಆರ್.ವಿ. ಪ್ರಸಾದ್, ಪ್ರಭಾತ್ ಆರ್ಟ್ ಇಂಟರ್ ನೇಷನಲ್ ಇದರ ನಿರ್ದೇಶಕರಾದ ಆಚಾರ್ಯ ರಾಘವೇಂದ್ರ ಜೆ. ಪ್ರಭಾತ್, ಗಾನಕಲಾ ಭೂಷಣ ವಿದ್ವಾನ್ ಡಾ. ಸುಮಾ ಸುಧೀಂದ್ರ, ಭಾರತಿಯ ಸಾಮಗಾನ ಸಭಾದ ಅಧ್ಯಕ್ಷರಾದ ಶ್ರೀ ಆರ್.ಆರ್. ರವಿಶಂಕರ್ ಮತ್ತು ವಿದ್ವಾನ್ ಮೈಸೂರು ನಾಗರಾಜ್ ಇವರೆಲ್ಲರ ಗೌರವ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಪೂರ್ವಾಹ್ನ 9.45ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗುತ್ತವೆ. ಇದರಲ್ಲಿ ವಿದುಷಿ ಕುಮಾರಿ ವಿಂಧ್ಯಾ ಆಚಾರ್ಯ ಕೆ. ಇವರಿಂದ ಭರತನಾಟ್ಯ ಕಾರ್ಯಕ್ರಮ, ವಿದ್ವಾನ್ ಮೈಸೂರು ನಾಗರಾಜ್ ಮತ್ತು ಶ್ರೀ ಕಾರ್ತಿಕ್ ನಾಗರಾಜ್ ಇವರು ಜೊತೆಯಾಗಿ ನುಡಿಸುವ ವಯೊಲಿನ್ ಗೆ ವಿದ್ವಾನ್ ಅರ್ಜುನ್ ಕುಮಾರ್ ಮೃದಂಗ ಹಾಗೂ ವಿದ್ವಾನ್ ಜಿ. ಗುರು ಪ್ರಸನ್ನ ಇವರು ಖಂಜೀರ ನುಡಿಸಲಿದ್ದಾರೆ. ತದ ನಂತರ ಸಭಾಂಗಣ ಸಮರ್ಪಣಾ ಕಾರ್ಯಕ್ರಮ ಮತ್ತು ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.
ಜೂನ್ 30ರಂದು ನಡೆಯುವ ಈ ಕಾರ್ಯಕ್ರಮಕ್ಕೆ ಶ್ರೀ ರಾಮಸೇವಾ ಮಂಡಳಿ ಟ್ರಸ್ಟಿನ ಅಧ್ಯಕ್ಷರು, ಉಪಾಧ್ಯಕ್ಷರು, ಟ್ರಸ್ಟಿಗಳು ಹಾಗೂ ಸರ್ವ ಸದಸ್ಯರು ತಮಗೆಲ್ಲಾ ಆದರದ ಸ್ವಾಗತ ಕೋರಿದ್ದಾರೆ.