ಸ್ಟಾಕ್‌ಹೋಮ್: ದಕ್ಷಿಣ ಕೊರಿಯಾದ ಬರಹಗಾರ್ತಿ ಹಾಗೂ ಸಾಹಿತಿ ಹ್ಯಾನ್ ಕಾಂಗ್ ಇವರು 2024ನೇ ಸಾಲಿನ ಪ್ರತಿಷ್ಠಿತ ನೊಬೆಲ್ ಸಾಹಿತ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮನುಕುಲದ ಜೀವನ ಸೂಕ್ಷ್ಮತೆ ಹಾಗೂ ಮಾನವ ಜೀವನದಲ್ಲಿ ಎದುರಿಸಿದ ಐತಿಹಾಸಿಕ ಆಘಾತಗಳ ಬಗ್ಗೆ ಕಾವ್ಯದ ರೂಪದಲ್ಲಿ ಕಟ್ಟಿಕೊಟ್ಟ ಹ್ಯಾನ್ ಕಾಂಗ್ ಅವರಿಗೆ ನೊಬೆಲ್ ಪ್ರಶಸ್ತಿ ನೀಡಲಾಗಿದೆ ಎಂದು ಸ್ವೀಡಿಶ್ ಅಕಾಡೆಮಿ ತಿಳಿಸಿದೆ. ಪ್ರಶಸ್ತಿ 1.10 ಕೋಟಿ ಡಾಲರ್ ನಗದು ಹಾಗೂ ಪಾರಿತೋಷಕ ಹೊಂದಿದೆ.
ದೇಹ ಹಾಗೂ ಆತ್ಮ, ಜೀವ ಹಾಗೂ ಮರಣದ ನಡುವಿನ ಸಂಪರ್ಕಗಳ ಬಗ್ಗೆ ವಿಶಿಷ್ಟ ಅರಿವು ಹೊಂದಿರುವ ಹ್ಯಾನ್ ಕಾಂಗ್ ಅವರು ಸಮಕಾಲಿನ ವಿಷಯಗಳನ್ನು ಕಾವ್ಯ ಹಾಗೂ ಗದ್ಯದ ರೂಪದಲ್ಲಿ ವಿವರಿಸುವ ಮೂಲಕ ಸಾಹಿತ್ಯಕ್ಕೆ ಹೊಸ ರೂಪ ನೀಡಿದ್ದಾರೆ. ಎಂದು ಪ್ರಶಸ್ತಿ ಘೋಷಣೆ ಮಾಡಿದ ಸ್ವೀಡಿಷ್ ಅಕಾಡೆಮಿ ಹೇಳಿದೆ.
ಸಣ್ಣ ಕಥೆ, ಕಾದಂಬರಿ, ಕಾವ್ಯ ರಚನೆಯ ಮೂಲಕ ದಕ್ಷಿಣ ಕೊರಿಯಾದಲ್ಲಿ ಮನೆಮಾತಾಗಿರುವ ಹ್ಯಾನ್ ಕಾಂಗ್ ಇವರು ‘ದಿ ವೆಜಿಟೇರಿಯನ್’ ಕಾದಂಬರಿಗೆ 2016ರಲ್ಲಿ ಬುಕರ್ ಪ್ರಶಸ್ತಿ ಪಡೆದಿದ್ದರು. ಇವರ ‘ಐ ಡು ನಾಟ್ ಬಿಡ್ ಫೇರ್ ವೆಲ್’ ಕೃತಿಗೆ ಫ್ರಾನ್ಸ್ ಇಲ್ಲಿನ ಮೇಡಿಸಿಸ್ ಪ್ರಶಸ್ತಿ ಹಾಗೂ ಎಮಿಲ್ ಗೈಮೆಟ್ ಪ್ರಶಸ್ತಿಗಳು ಲಭಿಸಿವೆ. ಇವರು ಸಾಹಿತ್ಯ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ದಕ್ಷಿಣ ಕೊರಿಯಾದ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಾತ್ರವಾಗಿದ್ದಾರೆ.
Subscribe to Updates
Get the latest creative news from FooBar about art, design and business.
Previous Articleಕವನ ಸ್ಪರ್ಧೆಗೆ ಕವನಗಳ ಆಹ್ವಾನ | ಅಕ್ಟೋಬರ್ 31
Next Article ಕಡಬದಲ್ಲಿ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ