ಉಡುಪಿ : ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆಯೋಜಿಸುತ್ತಿರುವ ಸಾಪ್ತಾಹಿಕ ನೃತ್ಯ ಸರಣಿ ಕಾರ್ಯಕ್ರಮವಾದ ‘ನೃತ್ಯಶಂಕರ’ದ ಆಗಸ್ಟ್ ತಿಂಗಳ ಸರಣಿ ಕಾರ್ಯಕ್ರಮವು ಆಗಸ್ಟ್ 7,14,21,28ರ ಸೋಮವಾರದಂದು ಕೊಡವೂರಿನ ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ.
ದಿನಾಂಕ 07-08-2023 ರಂದು ವಿದ್ವಾನ್ ಸುಧೀರ್ ರಾವ್ ಹಾಗೂ ವಿದುಷಿ ಮಾನಸಿ ಸುಧೀರ್ ಇವರ ಶಿಷ್ಯೆಯಾದ ವಿದುಷಿ ಅನಘಶ್ರೀ ಕಾರ್ಯಕ್ರಮ ನೀಡಲಿದ್ದು, ದಿನಾಂಕ 14-08-2023 ರಂದು ಶಾಂತಲಾ ಪ್ರಶಸ್ತಿ ಪುರಸ್ಕೃತ ನಾಟ್ಯಗುರು ಉಳ್ಳಾಲ ಮೋಹನ್ ಕುಮಾರ್, ವಿದುಷಿ ರಾಜಶ್ರೀ ಉಳ್ಳಾಲ, ವಿದುಷಿ ಶಾರದಾಮಣಿ ಶೇಖರ್ ಹಾಗೂ ಬೆಂಗಳೂರಿನ ವಿದ್ವಾನ್ ಪ್ರವೀಣ್ ಇವರ ಶಿಷ್ಯ ವಿದ್ವಾನ್ ಪ್ರಮೋದ್ ಉಳ್ಳಾಲ ಕಾರ್ಯಕ್ರಮ ನೀಡಲಿದ್ದಾರೆ. ದಿನಾಂಕ 21-08-2023ರಂದು ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಇವರ ಶಿಷ್ಯೆಯಾದ ಕುಮಾರಿ ಮೇಘ ಮಲಾರ್ ಪ್ರಭಾಕರ್ ಕಾರ್ಯಕ್ರಮ ನೀಡಲಿದ್ದು, ದಿನಾಂಕ 28-08-2023 ರಂದು ವಿದುಷಿ ವಿದ್ಯಾಮನೋಜ್ ಇವರ ಶಿಷ್ಯೆಯಾದ ಡಾ.ಮಹಿಮಾ ಎಂ.ಪಣಿಕ್ಕರ್ ಕಾರ್ಯಕ್ರಮ ನೀಡಲಿದ್ದಾರೆ.

