ಬೆಂಗಳೂರು : ಕಪ್ಪಣ್ಣ ಅಂಗಳ ಇದರ ವತಿಯಿಂದ ಸ್ನೇಹ ಕಪ್ಪಣ್ಣ ಇವರ ಕರ್ನಾಟಕ ಜನಪದ ನೃತ್ಯದ ವಿಶೇಷ ಅಧ್ಯಯನಾತ್ಮಕ ‘ನೃತ್ಯ ಬೇರು’ ಇಂಗ್ಲೀಷ್ ಮತ್ತು ಕನ್ನಡ ಕೃತಿಗಳ ಬಿಡುಗಡೆ ಸಮಾರಂಭವನ್ನು ದಿನಾಂಕ 23 ಮಾರ್ಚ್ 2025ರಂದು ಬೆಳಿಗ್ಗೆ 10-30 ಗಂಟೆಗೆ ಬೆಂಗಳೂರಿನ ಎನ್.ಆರ್. ಕಾಲೋನಿಯಲ್ಲಿರುವ ಡಾ. ಅಶ್ವಥ್ ಕಲಾಭವನದಲ್ಲಿ ಆಯೋಜಿಸಲಾಗಿದೆ.
ನಿವೃತ್ತ ಐ.ಎ.ಎಸ್. ಅಧಿಕಾರಿಗಳಾದ ಶ್ರೀ ಚಿರಂಜೀವ್ ಸಿಂಗ್, ಕನ್ನಡ ವಿಶ್ವವಿದ್ಯಾಲಯ ನಿವೃತ್ತ ಕುಲಪತಿಗಳಾದ ಡಾ. ಹಿ.ಚಿ. ಬೋರಲಿಂಗಯ್ಯ, ಕೊಯಂಬತ್ತೂರ್ ಶ್ರೀಸರಸ್ವತಿ ವಿದ್ಯಾಮಂದಿರ (ಎಸ್.ಎಸ್.ವಿ.ಎಂ.) ಸಂಸ್ಥಾಪಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಮಣಿಮೇಖಲೈ ಮೋಹನ್ ಮತ್ತು ಶ್ರೀ ಮೋಹನ್ ದಾಸ್, ಭಾನುಮತಿ ನೃತ್ಯ ಕಲಾಮಂದಿರಂ ನಿರ್ದೇಶಕಿ ನೃತ್ಯ ನಿಪುಣೆ ಗುರು ಶ್ರೀಮತಿ ಶೀಲಾ ಚಂದ್ರಶೇಖರ್ ಹಾಗೂ ಸಪ್ನಾ ಬುಕ್ ಹೌಸ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ನಿತಿನ್ ಷಾ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.