ಮಂಗಳೂರು : ಮಂಗಳೂರಿನ ಪ್ರತಿಷ್ಟಿತ ನೃತ್ಯ ಸಂಸ್ಥೆಯಾದ ನೃತ್ಯಾಂಗನ್ ಮತ್ತು ರಂಗ ಅಧ್ಯಯನ ಕೇಂದ್ರ ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಮಂಗಳೂರು ಇವರು ಪ್ರಸ್ತುತ ಪಡಿಸುವ ‘ನೃತ್ಯ ಲಹರಿ’ ಎಂಬ ಶಾಸ್ತ್ರೀಯ ನೃತ್ಯ ಸರಣಿ ಕಾರ್ಯಕ್ರಮವನ್ನು ಅಕ್ಟೋಬರ್ ನಿಂದ ದಶಂಬರ ತಿಂಗಳಿನವರೆಗೆ ಆಯೋಜಿಸಿದ್ದು, ಅದರ ಮೊದಲ ಕಾರ್ಯಕ್ರಮವು ದಿನಾಂಕ 20 ಅಕ್ಟೋಬರ್ 2024ರಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಎಲ್.ಸಿ.ಆರ್.ಐ. ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ದಕ್ಷಿಣ ಕನ್ನಡ ಹಾಗೂ ಉಡುಪಿಯ ನೃತ್ಯ ಗುರುಗಳ ಎಂಟು ವಿದ್ಯಾರ್ಥಿಗಳು ಮಂಗಳೂರಿನ ಖ್ಯಾತ ನೃತ್ಯ ಗುರು ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಇವರ ನಿರ್ದೇಶನದಲ್ಲಿ ನೃತ್ಯ ಪ್ರದರ್ಶನವನ್ನು ನೀಡಲಿದ್ದಾರೆ. ಬಳಿಕ ಬೆಂಗಳೂರಿನ ಪ್ರಸಿದ್ಧ ನೃತ್ಯ ಪಟು ವಿದ್ವಾನ್ ಪ್ರವೀಣ್ ಕುಮಾರ್ ಹಾಗೂ ಅವರ ಸಂಸ್ಥೆ ಚಿತ್ಕಲ ಇದರ ಕಲಾವಿದೆಯರು ‘ತ್ಯಾಗರಾಜ ಹೃತ್ ಸಾಧನ’ ನೃತ್ಯ ಪ್ರಸ್ತುತಿಯನ್ನು ಪ್ರದರ್ಶಿಸಲಿದ್ದಾರೆ. ಟಿಕೇಟ್ ಖರೀದಿಸಿ ನೃತ್ಯಾಸಕ್ತರು ಕಲಾಸ್ವಾದನೆಗೆ ಬರಬೇಕೆಂದು ನೃತ್ಯಾಂಗನ್ ಸಂಸ್ಥೆಯ ನಿರ್ದೇಶಕಿ ರಾಧಿಕಾ ಶೆಟ್ಟಿ ತಿಳಿಸಿರುತ್ತಾರೆ.