13 ಫೆಬ್ರವರಿ 2023, ಮಂಗಳೂರು: “ಕಲೆ ಒಂದು ಧ್ಯಾನ. ಕಲೆಯನ್ನು ಪ್ರೀತಿಸಿ.”
ಕುಳಾಯಿ ಹೊಸಬೆಟ್ಟು ಶ್ರೀ ಶಾರದಾ ನಾಟ್ಯಾಲಯದ ಆಶ್ರಯದ ರಜತ ಸಂಭ್ರಮದ ಪ್ರಯುಕ್ತ ” ನೃತ್ಯ ಶರಧಿ ” ಸರಣಿ ಕಾರ್ಯಕ್ರಮವು ಫೆಬ್ರವರಿ 12ರಂದು ಕುದ್ಮಲ್ ರಂಗರಾವ್ ಪುರಭವನದಲ್ಲಿ ನಡೆಯಿತು. ನಟರಾಜನಿಗೆ ದೀಪ ಹಚ್ಚಿ ಸಾಂಕೇತಿಕವಾಗಿ ಉದ್ಘಾಟನೆಯಾದ ಹಿನ್ನೆಲೆಯಲ್ಲಿ ಸನಾತನ ನಾಟ್ಯಾಲಯದ ನಿರ್ದೇಶಕಿ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾ ಮಣಿ ಶೇಖರ್ ಮಾತನಾಡುತ್ತ ” ಕಲೆ ಒಂದು ಧ್ಯಾನ. ನಾವು ಕಲೆಯನ್ನು ಪ್ರೀತಿಸಿದರೆ, ಸಮಾಜವೇ ಪ್ರೀತಿಸುತ್ತದೆ.” ಎಂದು ಹೇಳುವ ಮೂಲಕ ನೃತ್ಯ ಕಲೆಯ ಬಗ್ಗೆ ಅವರಿಗಿರುವ ಅಭಿಮಾನ ಪ್ರಕಟವಾಯಿತು.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಪಿ. ಕಮಲಾಕ್ಷ ಆಚಾರ್ “ನೃತ್ಯ ಪಾರಮಾರ್ಥಿಕ ಕಲೆ. ಅದು ಕೊಡುವ ಪರಮಾನಂದ ಭಗವಂತನನ್ನು ತಲುಪುವುದಕ್ಕೆ ಸಾಧನವಾಗಿದೆ. ” ಎಂದರು. ನೃತ್ಯ ಗುರು ವಿದುಷಿ ಭಾರತಿ ಸುರೇಶ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸರಿಯಾದ ಸಮಯಕ್ಕೆ ಆರಂಭಿಸಿ ಸಮಯ ಪ್ರಜ್ಞೆಯನ್ನು ಮರೆದಿರುವುದು ಗಮನಾರ್ಹ. ಸಂಸ್ಥೆಯ ಸದಸ್ಯೆಯರಿಂದ ನೃತ್ಯ ಪ್ರದರ್ಶನ ನಡೆಯಿತು. ಶ್ರೀ ದಾಮೋದರ ಶರ್ಮಾ ಕಾರ್ಯಕ್ರಮ ನಿರೂಪಿಸಿದರು.

