ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.) ಪುತ್ತೂರು ಅರ್ಪಿಸುವ ‘ನೃತ್ಯಾಂತರಂಗ 128’ ನೃತ್ಯ ಕಾರ್ಯಕ್ರಮವನ್ನು ದಿನಾಂಕ 07 ಜೂನ್ 2025ರಂದು ಸಂಜೆ 5-30 ಗಂಟೆಗೆ ಪುತ್ತೂರಿನ ದರ್ಬೆಯ ಶಶಿಶಂಕರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ವಿದ್ವಾನ್ ದೀಪಕ್ ಕುಮಾರರ ಶಿಷ್ಯೆ ಕುಮಾರಿ ನಿಶಿ ಎನ್. ಇವರು ನೃತ್ಯ ಪ್ರದರ್ಶನ ನೀಡಲಿದ್ದು, ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸಂಧ್ಯಾ ಕೆ. ಇವರು ಅಭ್ಯಾಗತರಾಗಿ ಭಾಗವಹಿಸಲಿರುವರು. ನಟುವಾಂಗದಲ್ಲಿ ವಿದ್ವಾನ್ ದೀಪಕ್ ಕುಮಾರ್, ಹಾಡುಗಾರಿಕೆಯಲ್ಲಿ ವಿದುಷಿ ಪ್ರೀತಿಕಲಾ, ಸುಳ್ಯದ ವಿದ್ವಾನ್ ಶ್ಯಾಮ್ ಭಟ್ ಮೃದಂಗದಲ್ಲಿ ಪೂಂಜಾಲಕಟ್ಟೆ ವಿದ್ವಾನ್ ಕೃಷ್ಣಗೋಪಾಲ್ ಇವರು ಕೊಳಲಿನಲ್ಲಿ ಸಹಕರಿಸಲಿದ್ದಾರೆ.