ಮಂಗಳೂರು : ಬಿಜೈಯಲ್ಲಿರುವ ನೃತ್ಯಾಂಗನ್ ಸಂಸ್ಥೆಯ ವತಿಯಿಂದ ‘ನೃತ್ಯೋಲ್ಲಾಸ 2025’ ಕಾರ್ಯಕ್ರಮವನ್ನು ದಿನಾಂಕ 16 ನವೆಂಬರ್ 2025ರಂದು ಸಾಯಂಕಾಲ 5-00 ಗಂಟೆಗೆ ಮಂಗಳೂರಿನ ಡಾನ್ ಬೋಸ್ಕೋ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ.
ವೇದ್ಯ ಸ್ಪೂರ್ತಿ ಕೊಂಡ ಇವರು ಕೂಚಿಪುಡಿ ಪ್ರದರ್ಶನ ನೀಡಲಿದ್ದಾರೆ. ಅದ್ವಿತಾ ಜಿ. ರಾವ್, ಪ್ರೇರಣಾ ಶೆಣೈ ಮತ್ತು ಅವನಿ ಎಸ್. ಇವರಿಂದ ಹಾಗೂ ನೃತ್ಯಾಂಗನ್ ಸಂಸ್ಥೆಯ ವಿದ್ಯಾರ್ಥಿಗಳಿಂದ ನಡೆಯುವ ಭರತನಾಟ್ಯ ಪ್ರದರ್ಶನಕ್ಕೆ ನಟುವಾಂಗದಲ್ಲಿ ರಾಧಿಕಾ ಶೆಟ್ಟಿ, ಹಾಡುಗಾರಿಕೆಯಲ್ಲಿ ವಿದ್ಯಾಶ್ರೀ ರಾಧಾಕೃಷ್ಣ, ಮೃದಂಗದಲ್ಲಿ ಬಾಲಚಂದ್ರ ಭಾಗವತ್ ಮತ್ತು ಕೊಳಲಿನಲ್ಲಿ ರಾಜಗೋಪಾಲ ಕಾಂಞಗಾಡ್ ಇವರುಗಳು ಸಹಕರಿಸಲಿದ್ದಾರೆ.


