ಬೆಂಗಳೂರು : ಕಪ್ಪಣ್ಣ ಅಂಗಳ ಇದರ ವತಿಯಿಂದ 89ನೇ ಶಾಸ್ತ್ರೀಯ ನೃತ್ಯ ‘ನೃತ್ಯ ಭಾನು’ ಕಾರ್ಯಕ್ರಮವನ್ನು ದಿನಾಂಕ 09 ಮೇ 2025ರಂದು ಸಂಜೆ 06-30 ಗಂಟೆಗೆ ಬೆಂಗಳೂರಿನ ಕಪ್ಪಣ್ಣ ಅಂಗಳದಲ್ಲಿ ಆಯೋಜಿಸಲಾಗಿದೆ. ಇದು ಶಾಂತಲಾ ನಾಟ್ಯ ಸಿರಿ ಪುರಸ್ಕೃತ ಗುರು ಬಿ. ಭಾನುಮತಿ ಇವರಿಗೆ ಸಮರ್ಪಿತ ಉತ್ಸವವಾಗಿದೆ.
ಗುರುಗಳಾದ ನಂದಿನಿ ಮೆಹ್ತಾ ಮತ್ತು ಮುರಳಿ ಮೋಹನ್ ಕಲ್ವಾಕಾಲ್ವ ಇವರ ಶಿಷ್ಯೆ ಸೌಮ್ಯ ರವಿ ಇವರಿಂದ ‘ಕಥಕ್’ ಮತ್ತು ಗುರು ಸೀತಾ ಗುರುಪ್ರಸಾದ್ ಮತ್ತು ಗುರು ಬಿ. ಭಾನುಮತಿ ಇವರ ಶಿಷ್ಯೆ ಭುವನಾ ಜಿ. ಪ್ರಸಾದ್ ಇವರಿಂದ ‘ಭರತನಾಟ್ಯ’ ಪ್ರದರ್ಶನ ನಡೆಯಲಿದೆ.