ಮಂಗಳೂರು : ಉರ್ವ ನಾಟ್ಯಾರಾಧನಾ ಕಲಾ ಕೇಂದ್ರದ ತ್ರಿಂಶೋತ್ಸವ ಅಂಗವಾಗಿ ‘ನೃತ್ಯಾಮೃತ’ ಸರಣಿ ಕಾರ್ಯಕ್ರಮ ಹಿನ್ನೆಲೆ ಪಾವಂಜೆ ನಾಟ್ಯಾಂಜಲಿ ಕಲಾ ಮಂದಿರದಲ್ಲಿ ‘ನೃತ್ಯ ಲಹರಿ’ ಕಾರ್ಯಕ್ರಮವು ದಿನಾಂಕ 03-03-2024 ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹವ್ಯಾಸಿ ಯಕ್ಷಗಾನ ಕಲಾವಿದ ಡಾ. ಸತ್ಯಮೂರ್ತಿ ಐತಾಳ್ “ಭರತನಾಟ್ಯ ಕಲೆಯು ಕಲಾವಿದರಿಗೆ ಮಾತ್ರವಲ್ಲದೆ ಕಲಾ ಪ್ರೇಕ್ಷಕರನ್ನೂ ಆಧ್ಯಾತ್ಮಿಕ ಆನಂದ ಕಡಲಲ್ಲಿ ತೇಲಿಸಿ ಆತ್ಮೋನ್ನತಿಗೆ ಪೂರಕವಾದ ಭಾವಾನಂದ ನೀಡುತ್ತದೆ. ಅದು ಭರತನಾಟ್ಯ ಕಲೆಯ ಶಕ್ತಿ.” ಎಂದರು.
ಉದ್ಯಮಿ ವಿಶ್ವೇಶ್ವರ ಬದವಿದೆ ಹೊಸಬೆಟ್ಟು ಕಾರ್ಯಕ್ರಮ ಉದ್ಘಾಟಿಸಿದರು. ಬೈಕಾಡಿ ಶ್ರೀನಿವಾಸ ರಾವ್, ವಿದುಷಿ ಸುಲೋಚನಾ ವಿ. ಭಟ್, ವಿದುಷಿ ವೀಣಾ ಎಂ. ಸಾಮಗ ಉಡುಪಿ, ವೈ. ರಾಘವೇಂದ್ರ ರಾವ್ ಸುರತ್ಕಲ್, ನಯನ ಹೆಜಮಾಡಿ, ಸಂಸ್ಥೆಯ ಟ್ರಸ್ಟಿ ರತ್ನಾಕರ ರಾವ್, ತ್ರಿಂಶೋತ್ಸವ ಸಮಿತಿ ಅಧ್ಯಕ್ಷ ಡಾ. ಗಣೇಶ್ ಅಮೀನ್ ಸಂಕಮಾರ್ ಉಪಸ್ಥಿತರಿದ್ದರು.
ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ ಸುರತ್ಕಲ್ ಖಂಡಿಗೆ-ಚೇಳಾಯ್ರು , ಸನಾತನ ನಾಟ್ಯಾಲಯ ಮಂಗಳೂರು, ನೃತ್ಯಾಂಗನ್ ಮಂಗಳೂರು, ನೃತ್ಯ ಸುಧಾ ಮೇರಿಹಿಲ್ ಮಂಗಳೂರು, ನೃತ್ಯ ಸೌರಭ ನಾಟ್ಯಾಲಯ ಉಳ್ಳಾಲ, ನೃತ್ಯ ನಿಕೇತನ ಕೊಡವೂರು ಮತ್ತು ಭರತಾಂಜಲಿ ಕೊಟ್ಟಾರ ಸಂಸ್ಥೆಯ ವಿದ್ಯಾರ್ಥಿಗಳಿಂದ ಭರತನಾಟ್ಯ ಹಾಗೂ ಹುಬ್ಬಳ್ಳಿಯ ಸುಜಯ್ ಶಾನಭಾಗ್ ಅವರ ‘ರಂಗ- ಭಕ್ತಿಯ ರಸದೋಕುಳಿ’ ‘ ಏಕವ್ಯಕ್ತಿ ನೃತ್ಯ ಪ್ರದರ್ಶನಗೊಂಡಿತು.
ನಾಟ್ಯಾರಾಧನಾ ಸಂಸ್ಥೆಯ ಟ್ರಸ್ಟಿ ವಿದುಷಿ ಸುಮಂಗಲಾ ರತ್ನಾಕರ ರಾವ್ ಸ್ವಾಗತಿಸಿ, ವಿದುಷಿ ಭವ ಅಮೀನ್ ಸಂಕಮಾರ್ ನಿರೂಪಿಸಿ, ವಿದುಷಿ ಡಾ. ಚೈತ್ರಶ್ರೀ ವಂದಿಸಿದರು.
1 Comment
ಕಾರ್ಯಕ್ರಮದ ಪ್ರಚಾರಕ್ಕೆ ಸಹಕರಿಸಿರುವ ರೂವಾರಿಗೆ ಕೃತಜ್ಞರು 🙏☺