ಮಂಗಳೂರು : ನೃತ್ಯ ಸುಧಾ (ರಿ.) ಮಂಗಳೂರು – ಉಡುಪಿ ಇದರ ವತಿಯಿಂದ ಇಪ್ಪತ್ತೊಂದು ಸಂವತ್ಸರಗಳ ನೃತ್ಯ ಪಯಣದ ಮೆಲುಕು ‘ನೃತ್ಯ ಸುಧಾರ್ಪಣಂ -2026’ ಕಾರ್ಯಕ್ರಮವನ್ನು ದಿನಾಂಕ 11 ಜನವರಿ 2026ರಂದು ಸಂಜೆ 4-30 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಮಂಗಳೂರು ಶಾರದಾ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ.ಬಿ. ಪುರಾಣಿಕ್, ಕದ್ರಿ ನೃತ್ಯ ವಿದ್ಯಾನಿಲಯದ ನಿರ್ದೇಶಕರಾದ ಗುರು ವಿದ್ವಾನ್ ಯು.ಕೆ. ಪ್ರವೀಣ್ ರಾವ್ ಮತ್ತು ಭರತಾಂಜಲಿಯ ನಿರ್ದೇಶಕರಾದ ಗುರು ವಿದುಷಿ ಪ್ರತಿಮಾ ಶ್ರೀಧರ್ ಇವರುಗಳು ಅಭ್ಯಾಗತರಾಗಿ ಭಾಗವಹಿಸಲಿದ್ದು, ಸಂಸ್ಥೆಯ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಲಿದೆ.

