ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.) ಪುತ್ತೂರು ಅರ್ಪಿಸುವ ‘ನೃತ್ಯಾಂತರಂಗ 129’ ನೃತ್ಯ ಕಾರ್ಯಕ್ರಮವನ್ನು ದಿನಾಂಕ 14 ಜೂನ್ 2025ರಂದು ಸಂಜೆ 5-30 ಗಂಟೆಗೆ ಪುತ್ತೂರಿನ ದರ್ಬೆಯ ಶಶಿಶಂಕರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ವಿದುಷಿ ಶಿಲ್ಪಾ ನಂಜಪ್ಪ ಇವರು ಕೊಡವ ಸಂಸ್ಕೃತಿ ಮತ್ತು ಪರಂಪರೆಯ ಕುರಿತು ಸಂಶೋಧನೆ ಆಧಾರಿತ ಭರತನಾಟ್ಯ ಪ್ರದರ್ಶನ ನೀಡಲಿದ್ದು, ಪುತ್ತೂರಿನ ಉದ್ಯಮಿ ಏಳ್ತಿಮಾರ್ ವಿಜಯಲಕ್ಷ್ಮೀ ಶೆಣೈ ಇವರು ಅಭ್ಯಾಗತರಾಗಿ ಭಾಗವಹಿಸಲಿರುವರು.