ಉಡುಪಿ : ಶ್ರೀ ನಟರಾಜ ನೃತ್ಯನಿಕೇತನ ಚಿತ್ರಪಾಡಿ ಸಾಲಿಗ್ರಾಮ ಉಡುಪಿ ಪ್ರಸ್ತುತ ಪಡಿಸುವ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಐರೋಡಿ ಸಹಯೋಗದೊಂದಿಗೆ 32ನೇ ವಾರ್ಷಿಕೋತ್ಸವ ‘ನೃತ್ಯೋಲ್ಲಾಸ 2025’ ಕಾರ್ಯಕ್ರಮವನ್ನು ದಿನಾಂಕ 25 ಡಿಸೆಂಬರ್ 2025ರಂದು ಸಂಜೆ 5-00 ಗಂಟೆಗೆ ಸಾಲಿಗ್ರಾಮ ಗುಂಡ್ಮಿಯ ಸದಾನಂದ ರಂಗಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ಶ್ರೀ ರಾಜೇಂದ್ರ ಎಸ್. ನಾಯಕ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ರಾಜಶೇಖರ ಹೆಬ್ಬಾರ್ ಇವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಸಾಧಕ ಪ್ರಶಸ್ತಿ ಪುರಸ್ಕಾರ ಮತ್ತು ಸಾಧಕ ಸಿರಿ ಪುರಸ್ಕಾರ ಪ್ರದಾನ ಹಾಗೂ ಸಂಸ್ಥೆಯ ವಿದ್ಯಾರ್ಥಿಗಳು ನೂಪುರದ ನಿನಾದಗಳ ಸರಮಾಲೆಯೊಂದಿಗೆ ಹೆಜ್ಜೆಗಳನ್ನಿಡಲಿದ್ದಾರೆ.

