Subscribe to Updates

    Get the latest creative news from FooBar about art, design and business.

    What's Hot

    ಸಂಗೀತ ವಿಮರ್ಶೆ | ಶ್ರೋತೃಗಳನ್ನು ಸೆಳೆದ ಸಾಯಿ ವಿಘ್ನೇಶ್ ಹಾಡುಗಾರಿಕೆ

    February 13, 2026

    ಕಲಾವಿದ ಲಕ್ಷ್ಮಣ ಶೆಟ್ಟಿ ತಾರೆಮಾರ್ ಇವರಿಗೆ ‘ಬೊಂಡಾಲ ಪ್ರಶಸ್ತಿ’ ಪ್ರದಾನ | ಫೆಬ್ರವರಿ 19 ಮತ್ತು 20

    February 13, 2026

    ಸಂಗೀತ ಪರಿಷತ್ತಿನಿಂದ ‘ನಾದಾಲಯ’ ಗೃಹ ಸಂಗೀತ ಕಛೇರಿ | ಫೆಬ್ರವರಿ 14

    February 13, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ನುಡಿನಮನ – ಮುಂಗಾರು ಕವಿಗೋಷ್ಠಿ
    Literature

    ನುಡಿನಮನ – ಮುಂಗಾರು ಕವಿಗೋಷ್ಠಿ

    July 8, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಪೆರ್ಲ : ಸವಿಹೃದಯದ ಕವಿ ಮಿತ್ರರು ವೇದಿಕೆ ಪೆರ್ಲ ಮತ್ತು ಸಮತಾ ಸಾಹಿತ್ಯ ವೇದಿಕೆ ಪಾಣಾಜೆ ಇವುಗಳ ಸಹಯೋಗದಲ್ಲಿ ಪೆರ್ಲದ ವ್ಯಾಪಾರಿ ಭವನದಲ್ಲಿ ನುಡಿನಮನ ಹಾಗೂ ಮುಂಗಾರು ಕವಿಗೋಷ್ಠಿ ಕಾರ್ಯಕ್ರಮ ದಿನಾಂಕ 25-06-2023ರಂದು ಹಮ್ಮಿಕೊಳ್ಳಲಾಯಿತು. ಸಾಹಿತಿ, ಕೇಂದ್ರೀಯ ವಿದ್ಯಾಲಯದ ವಿಶ್ರಾಂತ ಮುಖ್ಯೋಪಾಧ್ಯಾಯ ಎಸ್.ಎನ್. ಭಟ್ ಸೈಪಂಗಲ್ಲು ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ “ವ್ಯಕ್ತಿಯ ಸಾವು ಜನಮಾನಸದಲ್ಲಿ ಪರಿಣಾಮ ಬೀರಬೇಕು. ಈ ರೀತಿಯ ಶ್ರೀಮಂತ ಸಾವನ್ನು ಪಡೆಯಬೇಕಾದರೆ ಬದುಕಿನಲ್ಲಿ ಅಪಾರ ಪರಿಶ್ರಮಪಟ್ಟಿರಬೇಕು” ಎಂದು ಅಭಿಪ್ರಾಯಪಟ್ಟರು.

    ಇತ್ತೀಚೆಗೆ ನಿಧನರಾದ ವ್ಯಾಪಾರಿ ಹಾಗೂ ಸಾಹಿತ್ಯ ಪೋಷಕರಾಗಿದ್ದ ಅಬ್ದುಲ್ ರಹಿಮಾನ್ ಅವರಿಗೆ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯ ಪೆರ್ಲ ಘಟಕದ ಉಪಾಧ್ಯಕ್ಷ ಪ್ರಸಾದ್ ಟಿ. ಪೆರ್ಲ ಅವರು ನುಡಿನಮನ ಸಲ್ಲಿಸಿ ಅಬ್ದುಲ್ ರಹಿಮಾನ್ ಅವರ ಸಂಘಟನಾ ಸಾಮರ್ಥ್ಯ, ಸಾಧನೆ ಹಾಗೂ ನಿಸ್ವಾರ್ಥ ಮನೋಭಾವವನ್ನು ಸ್ಮರಿಸಿದರು. ಬಜಕೂಡ್ಲು ಕೃಷ್ಣ ಪೈ ಮಾತನಾಡಿ, ಅಬ್ದುಲ್ ರಹಿಮಾನ್ ಅವರೊಂದಿಗಿನ ತಮ್ಮ ಒಡನಾಟದ ನೆನಪುಗಳನ್ನು ಹಂಚಿಕೊಂಡರು.

    ಆ ಬಳಿಕ ನಡೆದ ಮುಂಗಾರು ಕವಿಗೋಷ್ಠಿಯಲ್ಲಿ ನರಸಿಂಹ ಭಟ್ ಕಟ್ಟದ ಮೂಲೆ, ಶಂಕರ ನಾರಾಯಣ ಭಟ್ ಕಕ್ಕೆಪ್ಪಾಡಿ, ನಿರ್ಮಲಾ ಶೇಷಪ್ಪ ಖಂಡಿಗೆ, ನಳನಿ ಟೀಚರ್, ಹರ್ಷಿತಾ ಪಿ., ರಿತೇಶ್‌ ಕಿರಣ್ ಕಾಟುಕುಕ್ಕೆ, ಸವಿತಾ ರಾಮ ಕುಂಜ, ನಾರಾಯಣ ನಾಯ್ಕ ಕುದ್ಕೋಳಿ, ಸುಜಯಾ ಸಜಂಗದ್ದೆ, ಪ್ರಮೀಳಾ ಚುಳ್ಳಿಕಾನ, ಬಾಲಕೃಷ್ಣ ನಾಯ್ಕ ಏಳ್ಕಾನ ಅವರು ಸ್ವರಚಿತ ಕವನಗಳನ್ನು ಪ್ರಸ್ತುತಪಡಿಸಿದರು. ಹಿರಿಯ ಸಾಹಿತಿ, ವಿಶ್ರಾಂತ ಜಿಎಚ್ಎಸ್‌ಎಸ್‌ನ ಪ್ರಾಂಶುಪಾಲ ಡಾ. ಬೇ.ಸಿ. ಗೋಪಾಲಕೃಷ್ಣ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು.

    ಕಾಸರಗೋಡು ಜಿಲ್ಲಾ ಪಂಚಾಯತ್‌ ಸದಸ್ಯ ನಾರಾಯಣ ನಾಯ್ಕ ಅಡ್ಕಸ್ಥಳ, ಬದಿಯಡ್ಕದ ಅಂಬೇಡ್ಕರ್ ವಿಚಾರ ವೇದಿಕೆಯ ಅಧ್ಯಕ್ಷ ರಾಮ ಪಟ್ಟಾಜೆ, ಹಿರಿಯ ಸಾಹಿತಿ ಹರೀಶ್ ಪೆರ್ಲ ಉಪಸ್ಥಿತರಿದ್ದರು. ಹರ್ಷಿತಾ ಪ್ರಾರ್ಥಿಸಿದರು. ಸಮತಾ ಸಾಹಿತ್ಯ ವೇದಿಕೆಯ ಬಾಲಕೃಷ್ಣ ಬೇರಿಕೆ ಸ್ವಾಗತಿಸಿ, ಸವಿ ಹೃದಯದ ಕವಿಮಿತ್ರರು ವೇದಿಕೆಯ ಸಂಚಾಲಕ ಸುಭಾಷ್ ಪೆರ್ಲ ವಂದಿಸಿದರು. ನಳಿನಿ ಟೀಚರ್ ಸೈಪಂಗಲ್ಲು ನಿರೂಪಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleವಿಶೇಷ ಲೇಖನ | ನಾನು ಕಂಡಂತೆ ಶಾಸ್ತ್ರಿಗಳು – ರಾಮಕೃಷ್ಣ ಭಟ್, ನಿನ್ನಿಕಲ್ಲು, ಉಜಿರೆ
    Next Article “ನಮ್ಮ ಸಂಸಾರ ಅನ್ ಲೈನ್ ಅವಾಂತರ” ನಾಟಕ ಕೃತಿ ಲೋಕಾರ್ಪಣೆ ಹಾಗೂ ಮಕ್ಕಳ ಕವಿಗೋಷ್ಠಿ
    roovari

    Add Comment Cancel Reply


    Related Posts

    ಸಚ್ಚೇರಿಪೇಟೆಯಲ್ಲಿ ‘ತುಳುನಾಡಿನ ಬೆರ್ಮೆ‌ರು’ ಕೃತಿ ಬಿಡುಗಡೆ ಮತ್ತು ಮಾತುಕತೆ | ಫೆಬ್ರವರಿ 15

    February 13, 2026

    ಸಂಘಟಕ, ಪತ್ರಕರ್ತ, ಸಾಹಿತಿ ಜಯಾನಂದ ಪೆರಾಜೆಗೆ ‘ಕವಿಕಾವ್ಯ ವಿಭೂಷಣ ಪ್ರಶಸ್ತಿ’

    February 13, 2026

    ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕೃತಿ ಲೋಕಾರ್ಪಣೆ, ಸಂವಾದ, ವಿನೂತನ ಯಕ್ಷಪ್ರಸ್ತುತಿ | ಫೆಬ್ರವರಿ 13

    February 12, 2026

    ಪುಸ್ತಕ ವಿಮರ್ಶೆ | ಗಣೇಶ್ ಪ್ರಸಾದ್ ಜೀ (ಜೀ ಜೀ)ಯವರ ‘ಕಾಂತೆ ಕವಿತೆ’

    February 12, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.