ಬೆಂಗಳೂರು : ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇದರ ವತಿಯಿಂದ ‘ತಿಂಗಳ ನಾಟಕ ಸಂಭ್ರಮ’ದ ಪ್ರಯುಕ್ತ ‘ಒಡಲಾಳ’ ನಾಟಕ ಪ್ರದರ್ಶನವು ದಿನಾಂಕ 16 ನವೆಂಬರ್ 2024ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದ ಸಮುಚ್ಚಯ ಭವನದಲ್ಲಿ ನಡೆಯಲಿದೆ. ಈ ಸಂಭ್ರಮದಲ್ಲಿ ಕರ್ನಾಟಕ ಲೇಖಕಿಯರ ಸಂಘದ ಡಾ. ಎಚ್.ಎಲ್. ಪುಷ್ಪ ಇವರು ತಿಂಗಳ ಅತಿಥಿಯಾಗಿ ಭಾಗವಹಿಸಲಿರುವರು.
ದೇವನೂರು ಮಹಾದೇವ ರಚಿಸಿರುವ ನಾಟಕಕ್ಕೆ ಸಿಜಿಕೆ ರಂಗರೂಪ ನೀಡಿದ್ದು, ನವೀನ್ ಭೂಮಿ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಕುಣಿಗಲ್ ಮಧುರಿಮ ಥಿಯೇಟರ್ ತಂಡದವರು ಅಭಿನಯಿಸುವ ಈ ನಾಟಕಕ್ಕೆ ರಂಗ ಸಜ್ಜಿಕೆ : ಸತೀಶ್ ಪುರಪ್ಪೆಮನೆ, ಹಾಡುಗಳ ರಚನೆ : ಎಂ ಬೈರೇಗೌಡರು ರಾಮನಗರ, ಸಂಗೀತ : ಉಮೇಶ್ ಪತ್ತಾರ್, ಶುಭಕರ್ ಪುತ್ತೂರು, ನಿರ್ವಹಣೆ ಮತ್ತು ಪ್ರಚಾರ ಕಲೆ : ಚಂದ್ರಮೌಳಿ ಕೆ.ಪಿ. ಕುಣಿಗಲ್ ಹಾಗೂ ಸಹ ನಿರ್ದೇಶನ : ಸಂತೋಷ್ ತಿಪಟೂರು ಇವರು ಮಾಡಿರುತ್ತಾರೆ.
ನನ್ನ ಸ್ವರ್ಜಿತ ಒಂದ್ ಜೊತೆ ಹುಂಜ, ನಾಲ್ಕೈದು ಎಂಟೆಗಳು, ಅವಿಕ್ಕೊ ಮೊಟ್ಟೆ ನನ್ನ ಜೀವನಕ್ಕೆ ಆಧಾರ. ನನ್ನ ರಾಜಾ ಹುಂಜ ಒಂದೈತೆ, ಅದ್ ನಡೀತಿದ್ರೆ… ಗೌಡ್ರು ಎಂಟೆಯಿಲ್ಲಾ ಅದ್ರಿರಂದೇನಯಾ, ಅಂತ ನನ್ನ ಹುಂಜಾನಾ ಮಾರು ಅಂತಾಳೆ ಆ ಚಿಕ್ಸೊಸೆ. ಸೊಪ್ಪಾಕೇನಾ ನಾನು..