Subscribe to Updates

    Get the latest creative news from FooBar about art, design and business.

    What's Hot

    ಬೇಕಲದಲ್ಲಿ ‘ಸಮನ್ವಯ ಗಡಿನಾಡ ಜಾನಪದ ಉತ್ಸವ’ | ಫೆಬ್ರುವರಿ 01

    January 31, 2026

    ಕುಂದಾಪುರದ ಸರಕಾರಿ ಕಾಲೇಜಿನಲ್ಲಿ ‘ಉಡುಪಿ ಜಿಲ್ಲಾ ಗಮಕ ಕಲಾ ಸಮ್ಮೇಳನ’

    January 31, 2026

    ಪುಸ್ತಕ ಬಹುಮಾನಕ್ಕೆ ಕೃತಿ ಆಹ್ವಾನ | ಕೊನೆಯ ದಿನಾಂಕ ಮಾರ್ಚ್ 31

    January 31, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಜೆಪ್ಪು ಕಾಸ್ಸಿಯ ಪ್ರೌಢಶಾಲೆಯಲ್ಲಿ ಏಕದಿನ ಸಾಹಿತ್ಯ ಅಭಿಯಾನ
    Kannada

    ಜೆಪ್ಪು ಕಾಸ್ಸಿಯ ಪ್ರೌಢಶಾಲೆಯಲ್ಲಿ ಏಕದಿನ ಸಾಹಿತ್ಯ ಅಭಿಯಾನ

    December 22, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ವಿದ್ಯಾರ್ಥಿಗಳಿಗೆ ಏಕದಿನ ಸಾಹಿತ್ಯ ಅಭಿಯಾನದ ಅಂಗವಾಗಿ ಕನ್ನಡದ ನಡಿಗೆ ಶಾಲೆಯ ಕಡೆಗೆ, ಅಡಿಯಲ್ಲಿ ದಿನಾಂಕ 17 ಡಿಸೆಂಬರ್ 2025ರಂದು ಮಧ್ಯಾಹ್ನ 2-00 ಗಂಟೆಗೆ ಮಂಗಳೂರಿನ ಜೆಪ್ಪು ಕಾಸ್ಸಿಯ ಪ್ರೌಢಶಾಲೆಯ ಸಭಾಂಗಣದಲ್ಲಿ ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಮಕ್ಕಳ ಕವಿಗೋಷ್ಠಿಯೊಂದಿಗೆ ಕನ್ನಡ ಭವನ ದಕ್ಷಿಣ ಕನ್ನಡದ ಜಿಲ್ಲಾ ಘಟಕದ ಕಾರ್ಯಕ್ರಮವನ್ನು ನಡೆಸಲಾಯಿತು.

    ಶಿಕ್ಷಕಿ ಹಾಗೂ ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾಗಿರುವ ಶ್ರೀಮತಿ ರೇಖಾ ಸುದೇಶ್ ರಾವ್ ಸ್ವಾಗತಗೈದ ಈ ಸಮಾರಂಭವನ್ನು ಕಾಸಿಯಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶ್ರೀ ಎವರೆಸ್ಟ್ ಕ್ರಾಸ್ತ ಇವರ ಅನುಪಸ್ಥಿತಿಯಲ್ಲಿ ಹಿರಿಯ ಶಿಕ್ಷಕಿ ಆಲೀಸ್ ಕೆ.ಜೆ. ದೀಪ ಬೆಳಗಿ ಉದ್ಘಾಟನೆಗೈದರು.

    ಡಾ. ರವೀಂದ್ರ ಜೆಪ್ಪು ಇವರು ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದರು ಹಾಗೂ ಮಂಗಳೂರಿನ ಮಂಗಳಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಮೂಲವ್ಯಾಧಿ ತಜ್ಞ ಹಾಗೂ ಕಣಚೂರು ಆಯುರ್ವೇದ ಕಾಲೇಜಿನ ಮುಖ್ಯ ಸಲಹೆಗಾರ ಗಜಲ್ ಕವಿ ಡಾ. ಸುರೇಶ ನೆಗಳಗುಳಿ ಮುಖ್ಯ ಅತಿಥಿಯಾಗಿ ಮಕ್ಕಳ ಕವನ ವಾಚನದ ವಿಮರ್ಶೆಯೊಂದಿಗೆ ಕವನ ರಚನೆ, ವಾಚನದ ಬಗ್ಗೆ ಸವಿವರವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ “ಯಾವುದೇ ಭಾಷೆ, ಯಾವುದೇ ನೆಲ ಇದ್ದರೂ ಮನ ಮಾತ್ರ ತನ್ನ ಮೂಲ ಭಾಷೆ ಬಿಟ್ಟು ಹೋಗಬಾರದು. ಸ್ವಭಾಷೆ ಅಮೃತ ಸಮಾನ ಅದು ಸದಾ ಸೇವನೀಯ” ಎಂದರು.

    ಅನಿರುದ್ಧ, ಆದಿತ್ಯ, ವಿಠಲ, ನಿಶಾಂತ್, ಸೋನಾಲಿ, ಅಂಜಲಿ, ನೇತ್ರಾವತಿ, ಸಂಜಯ, ಶಶಾಂಕ, ಯಶಸ್, ರಾಹುಲ್, ದ್ಯಾಮಣ್ಣ, ಚಿರಂತ್, ಅರ್ಜುನ್, ಸಂಜನ್, ಮನೋಜ್, ಮನವೀತ್, ಸಚೀoದ್ರ, ಚಿನ್ಮಯ ಸಹಿತ ಸುಮಾರು 25ರಷ್ಟು ವಿದ್ಯಾರ್ಥಿಗಳು ಕವನ ವಾಚನ ಹಾಗೂ ರಸ ಪ್ರಶ್ನೆಯಲ್ಲಿ ಭಾಗವಹಿಸಿದ್ದರು. ಶಿಕ್ಷಕರಾದ ಸಂತೋಷ್ ಕವನ ವಾಚನಗೈದರು. ಶ್ರೀ ಉಮೇಶ್ ರಾವ್ ಕುಂಬ್ಳೆ ಕಾರ್ಯಾಧ್ಯಕ್ಷರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಲಾ ಕನ್ನಡ ಶಿಕ್ಷಕಿ ಶ್ರೀಮತಿ ಸುನೀತಾ ರೋಸ್ ಕ್ರಾಸ್ತಾ ನಿರೂಪಣೆಗೈದರು. ಕವನ ವಾಚನ, ರಸ ಪ್ರಶ್ನೆ ಕಾರ್ಯಕ್ರಮದ ಕೊನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ವಿತರಿಸಲಾಯಿತು. ಶಾಲಾ ಶಿಕ್ಷಕಿ ಶೃತಿ ವಂದನಾರ್ಪಣೆಗೈದರು. ಶಿಕ್ಷಕಿ ಅಲೀಸ್ ಕೆ.ಜೆ., ಡಾ ರವೀಂದ್ರ, ಶ್ರೀಮತಿ ಸುನೀತಾ ಹಾಗೂ ಡಾ. ನೆಗಳಗುಳಿ ಇವರನ್ನು ಶಾಲು ಸ್ಮರಣಿಕೆ ಸಹಿತ ಗೌರವಿಸಲಾಯಿತು.

    baikady kannada Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರಿನ ವಿವಿಧ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳಿಂದ ‘ನೃತ್ಯೋತ್ಸವ’ ಕಾರ್ಯಕ್ರಮ
    Next Article ಬೆಂಗಳೂರಿನಲ್ಲಿ ಮಂಜುನಾಥ್ ಇವರಿಂದ ತಾಳ ಪ್ರಕ್ರಿಯಾ ಕಾರ್ಯಾಗಾರ | ಡಿಸೆಂಬರ್ 25ರಿಂದ 27
    roovari

    Add Comment Cancel Reply


    Related Posts

    ಬೇಕಲದಲ್ಲಿ ‘ಸಮನ್ವಯ ಗಡಿನಾಡ ಜಾನಪದ ಉತ್ಸವ’ | ಫೆಬ್ರುವರಿ 01

    January 31, 2026

    ಕುಂದಾಪುರದ ಸರಕಾರಿ ಕಾಲೇಜಿನಲ್ಲಿ ‘ಉಡುಪಿ ಜಿಲ್ಲಾ ಗಮಕ ಕಲಾ ಸಮ್ಮೇಳನ’

    January 31, 2026

    ಪುಸ್ತಕ ಬಹುಮಾನಕ್ಕೆ ಕೃತಿ ಆಹ್ವಾನ | ಕೊನೆಯ ದಿನಾಂಕ ಮಾರ್ಚ್ 31

    January 31, 2026

    ಸಾಗರದಲ್ಲಿ ಮನೆಯಂಗಳದಿ ಜಾನಪದ ಸಂಭ್ರಮ ಹಾಗೂ ಸನ್ಮಾನ ಕಾರ್ಯಕ್ರಮ | ಫೆಬ್ರುವರಿ 01

    January 31, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.