ಬೆಂಗಳೂರು : ‘ಅಂತರಂಗ ಬಹಿರಂಗ’ ಬೆಂಗಳೂರು ಪ್ರಸ್ತುತ ಪಡಿಸುವ 2 ಹಾಸ್ಯ ನಾಟಕಗಳ ಪ್ರದರ್ಶನವೂ ದಿನಾಂಕ 27 ಜುಲೈ 2025ರ ಭಾನುವಾರದಂದು ಬೆಂಗಳೂರಿನ ಬಸವನಗುಡಿಯ ಎನ್. ಆರ್. ಕಾಲೋನಿಯಲ್ಲಿರುವ ಡಾ. ಸಿ. ಆರ್. ಅಶ್ವಥ್ ಕಲಾಭವನದಲ್ಲಿ ನಡೆಯಲಿದೆ.
ಸಂಜೆ ಘಂಟೆ 4.00ಕ್ಕೆ ಭೀಷ್ಮ ರಾಮಯ್ಯ ರಚನೆ ಮತ್ತು ನಿರ್ದೇಶನದ ‘ಬಾಯ್ಬಡ್ಕಿ’ ನಾಟಕ ಪ್ರದರ್ಶನಗೊಳ್ಳಲಿದ್ದು, ಸಂಜೆ ಘಂಟೆ 7.00 ಕ್ಕೆ ನಾಗವೇಣಿ ರಂಗನ್ ರಚಿಸಿ, ವನಿತಾ ರಂಗಾಯಣ ನಿರ್ದೇಶಿಸಿರುವ ‘ಬಾಯ್ ತುಂಬಾ ನಕ್ಬಿಡಿ’ ನಾಟಕ ಪ್ರದರ್ಶನಗಳ್ಳಲಿದೆ. ನಾಟಕಕ್ಕೆ ಪ್ರವೇಶ ಶುಲ್ಕವಿದ್ದು, ಬುಕ್ ಮೈ ಶೋ ಅಥವಾ 8660547776 ಸಂಖ್ಯೆಗೆ ಕರೆಮಾಡಿ ತಮ್ಮ ಆಸನಗಳನ್ನು ಕಾಯ್ಡಿರಿಸಬಹುದು.


1 Comment
ಪ್ರೀತಿಯ ಧನ್ಯವಾದಗಳು ರೂವಾರಿಗೆ…..