ಬೆಂಗಳೂರು : ವಿಜಯನಗರ ಬಿಂಬ (ರಿ.) ರಂಗ ಶಿಕ್ಷಣ ಕೇಂದ್ರ ಹಿರಿಯರ ವಿಭಾಗದ ವತಿಯಿಂದ ಒಂದು ವರ್ಷದ ರಂಗಭೂಮಿ ಡಿಪ್ಲೋಮೋ ತರಗತಿಗೆ ದಾಖಲಾತಿ ಪ್ರಾರಂಭವಾಗಿದೆ. ನಟನೆ, ರಂಗ ಚರಿತ್ರೆ, ವಸ್ತ್ರಾಲಂಕಾರ, ಪ್ರಸಾದನ, ಬೆಳಕು ವಿನ್ಯಾಸ, ರಂಗ ಗೀತೆಗಳ ಬಗ್ಗೆ ನುರಿತ ರಂಗತಜ್ಞರಿಂದ ವಾರಾಂತ್ಯ ತರಗತಿಗಳು ನಡೆಯಲಿದ್ದು, ಆಸಕ್ತರು ಹೆಚ್ಚಿನ ಮಾಹಿತಿಗಾಗಿ 9845265967, 9844152967, 9845734967, 9844017881 ಮತ್ತು 9880033018 ಸಂಖ್ಯೆಯನ್ನು ಸಂಪರ್ಕಿಸಿರಿ.