ಮಂಗಳೂರು : ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ರಾಜ್ಯ ಶಾಖೆ ಮತ್ತು ಕನ್ನಡ ವೈದ್ಯ ಬರಹ ಗಾರರ ಸಮಿತಿ ವತಿಯಿಂದ ಕಥಾ ಕಮ್ಮಟ ಕಾರ್ಯಾಗಾರ ಆನ್ ಲೈನ್ ಕಾರ್ಯಕ್ರಮವು ದಿನಾಂಕ 09 ಫೆಬ್ರವರಿ 2025ರಂದು ಮುಂಜಾನೆ 11-00 ಗಂಟೆಗೆ ನಡೆಯಲಿದೆ.
ಬೆಳಗಾವಿ ಮ.ನ.ರ ಸಂಘದ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ನಿರ್ಮಲಾ ಬಟ್ಟಲ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಕಥಾವಸ್ತುವಿನ ಆಯ್ಕೆ, ಕಥೆಯಲ್ಲಿ ಬಳಸುವ ಭಾಷಾ ಶೈಲಿ, ಕಥೆಯ ಆರಂಭ ಮತ್ತು ಅಂತ್ಯ ಮತ್ತು ಕಥೆ ಬರೆಯಲು ಪೂರ್ವ ತಯಾರಿ ಇವುಗಳ ಬಗ್ಗೆ ಮಾಹಿತಿ ನೀಡಲಾಗುವುದು. ತರಬೇತಿ ಪೂರ್ವ ಚಟುವಟಿಕೆಗಳನ್ನು ದಿನಾಂಕ 01ರಿಂದ 08 ಫೆಬ್ರವರಿ 2025ರವರೆಗೆ ಹಮ್ಮಿಕೊಳ್ಳಲಾಗಿದೆ. ನೋಂದಾಯಿಸಿಕೊಳ್ಳಲು ಕೊನೆಯ ದಿನಾಂಕ 31 ಜನವರಿ 2025 ಆಗಿರುತ್ತದೆ.