ಕುಂದಾಪುರ : ‘ನಾದಾವಧಾನ’ ಪ್ರತಿಷ್ಠಾನ ಕುಂದಾಪುರ ಇವರು ಬಡಗುತಿಟ್ಟು ಯಕ್ಷಗಾನದ ಭಾಗವತಿಕೆ-ಮದ್ದಳೆ-ಚಂಡೆ-ನೃತ್ಯಗಳ
ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸುತಿದ್ದು, ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದು. ತರಗತಿಗಳಲ್ಲಿ ಎ. ಪಿ. ಫಾಟಕ್ ಭಾಗವತಿಕೆ, ಅಶ್ವಿನಿ ಕೊಂಡದಕುಳಿ ನೃತ್ಯ ಹಾಗೂ ಎನ್. ಜಿ. ಹೆಗಡೆ ಚಂಡ ಮದ್ದಳೆ ಗುರುಗಳಾಗಿ ಯಕ್ಷಗಾನ ಶಿಕ್ಷಣ ನೀಡಲಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ‘ನಾದಾವಧಾನ’ ಸಂಸ್ಥೆಯಿಂದ ಆನೈನ್ ನಲ್ಲಿ ಯಕ್ಷಗಾನ ತರಗತಿಗಳನ್ನು ನಡೆಸುತ್ತಿದ್ದು, 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸಂಸ್ಥೆಯ ಅಡಿಯಲ್ಲಿ ಯಕ್ಷ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಆನೇಕರು ಈಗಾಗಲೇ ರಂಗ ಪ್ರವೇಶವನ್ನು ಮಾಡಿ ಹಲವು ವೇದಿಕೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ‘ನಾದಾವಧಾನ’ ಸಂಸ್ಥೆಯ ಕಾರ್ಯಕ್ರಮಗಳು ಮತ್ತು ವಿದ್ಯಾರ್ಥಿಗಳ ಪ್ರಸ್ತುತಿಗಳು ಕಲಾವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.
ತರಗತಿಗಳಿಗೆ ಸಂಬಂಧಪಟ್ಟ ಸೂಚನೆಗಳು ಈ ಕೆಳಗಿನಂತಿವೆ :
ಸಂಜೆ 7 ರಿಂದ 9ರ ಒಳಗಿನ ಸಮಯದಲ್ಲಿ ತರಗತಿಗಳು ನಡೆಯಲಿದ್ದು, ತರಗತಿಯು ಗೂಗಲ್ ಮೀಟ್ ನಲ್ಲಿ ನಡೆಯುತ್ತದೆ. ಕಲಿಕೆಗೆ ಬೇಕಾದ ನೋಟ್, ವಿಡಿಯೋ, ಆಡಿಯೋ ಇವುಗಳ ರೆಕಾರ್ಡಿಂಗ್ ನೀಡಲಾಗುವುದು. 10 ವರ್ಷಕ್ಕಿಂತ ಮೇಲ್ಪಟ್ಟವರು ಭಾಗವಹಿಸಬಹುದಾಗಿದ್ದು, ವರ್ಷಾಂತ್ಯದಲ್ಲಿ ರಂಗ ಪ್ರವೇಶಕ್ಕೆ ವೇದಿಕೆ ಒದಗಿಸಲಾಗುವುದು. ತರಗತಿಗಳಿಗೆ ಶುಲ್ಕ ಇರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಎನ್. ಜಿ. ಹೆಗಡೆ ಯಲ್ಲಾಪುರ 9448700024 ಇವರನ್ನು ಸಂಪರ್ಕಿಸಬಹುದು.