ಮಡಿಕೇರಿ : ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ಕೊಡಗು ಜಾನಪದ ಪರಿಷತ್ ಸಹಯೋಗದಲ್ಲಿ 4ನೇ ವರ್ಷದ ಜಾನಪದ ದಸರಾವನ್ನು ದಿನಾಂಕ 29 ಸೆಪ್ಟೆಂಬರ್ 2025ರಂದು ಬೆಳಗ್ಗೆ 10-00 ಗಂಟೆಗೆ ಆಯೋಜಿಸಲಾಗಿದೆ ಎಂದು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಮತ್ತು ಜಾನಪದ ದಸರಾ ಸಂಚಾಲಕ ಅನಿಲ್ ಹೆಚ್.ಟಿ. ತಿಳಿಸಿದ್ದಾರೆ. ಮಡಿಕೇರಿಯ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಜಾನಪದ ಕಲಾ ಪ್ರದರ್ಶನಗಳು ಆಯೋಜಿಸಲ್ಪಟ್ಟಿದ್ದು, ಇದೇ ಸಂದರ್ಭ ಜಾನಪದ ವಸ್ತು ಪ್ರದರ್ಶನ, ಕಲಾಜಾಥಾ ಕೂಡ ಜರುಗಲಿದೆ.
ಜಾನಪದ ದಸರಾ ಸಂದರ್ಭ ಕೊಡಗಿನ ಜಾನಪದ ಕಲಾವಿದರಿಗೆ ವೈವಿಧ್ಯಮಯ ಕಲಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಕೊಡಗಿನ ಜಾನಪದ ಕಲಾತಂಡಗಳು, ಕಲಾವಿದರು ಜಾನಪದ ದಸರಾ ಸಂದರ್ಭ ನೀಡಲು ಇಚ್ಚಿಸುವ ಪ್ರದರ್ಶನದ ಬಗ್ಗೆ ತಮ್ಮ ಹೆಸರನ್ನು ದಿನಾಂಕ 20 ಸೆಪ್ಟೆಂಬರ್ 2025ರ ಒಳಗಾಗಿ ನೋಂದಾಯಿಸಿಕೊಳ್ಳಬಹುದಾಗಿದೆ. ಜಾನಪದ ದಸರಾದಲ್ಲಿ ಕಲಾ ಪ್ರದರ್ಶನ ನೀಡಲಿಚ್ಚಿಸುವ ಕಲಾವಿದರು, ಕಲಾತಂಡಗಳು ಅರ್ಜಿಗಳನ್ನು ಅಧ್ಯಕ್ಷರು, ಕೊಡಗು ಜಾನಪದ ಪರಿಷತ್, ಕೇರಾಫ್ ಶಕ್ತಿ ದಿನಪತ್ರಿಕೆ, ಕೈಗಾರಿಕಾ ಬಡಾವಣೆ, ಮಡಿಕೇರಿ – 571201 ಇಲ್ಲಿಗೆ ಕಳುಹಿಸಬೇಕು, ಜಾನಪದ ದಸರಾ ಸಂಬಂಧಿತ ಹೆಚ್ಚಿನ ಮಾಹಿತಿಗೆ ಸಂಖ್ಯೆಗಳು – 98861 81613 ಪ್ರಧಾನ ಕಾರ್ಯದರ್ಶಿ ಎನ್.ಐ. ಮುನೀರ್ ಅಹಮ್ಮದ್ ಮತ್ತು 94486 14999 ಕೊಡಗು ಜಿಲ್ಲಾ ಜಾನಪದ ಪರಿಪತ್ ಖಜಾಂಜಿ ಎಸ್.ಎಸ್. ಎಂಪತ್ ಕುಮಾರ್ ಇವರನ್ನು ಸಂಪರ್ಕಿಸಬಹುದು.