Subscribe to Updates

    Get the latest creative news from FooBar about art, design and business.

    What's Hot

    ‘ಕರ್ನಾಟಕದ ಶತಾಯುಷಿಗಳು’ ಕೃತಿ ಲೋಕಾರ್ಪಣೆ ಸಮಾರಂಭ | ಜೂನ್ 25

    June 24, 2025

    ರಾಜ್ಯ ಮಟ್ಟದ ಎಂ.ಜಿ. ಕಾವೇರಮ್ಮ ಅರೆಭಾಷೆ ಕವನ ಸ್ಪರ್ಧೆಗೆ ಅರೆಭಾಷೆ ಕವನಗಳ ಆಹ್ವಾನ

    June 24, 2025

    ಲಿಂಗಾಯತ ಪ್ರಗತಿಶೀಲ ಸಂಘದ 2750ನೇ ‘ಶಿವಾನುಭವ’ದಲ್ಲಿ ‘ಸಂಗೀತ’ ಕ್ಷೇತ್ರದ ಉಪನ್ಯಾಸ

    June 24, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ದ. ಕ. ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವಿದ್ಯಾರ್ಥಿಗಳಿಗೆ ‘ಪ್ರತಿಭಾ ಕಲೋತ್ಸವ’
    Cultural

    ದ. ಕ. ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವಿದ್ಯಾರ್ಥಿಗಳಿಗೆ ‘ಪ್ರತಿಭಾ ಕಲೋತ್ಸವ’

    January 9, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮೂಡುಬಿದಿರೆ: ಭಾರತ್ ಸ್ಕೌಟ್ಸ್ ಗೈಡ್ಸ್ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಮೂಡುಬಿದಿರೆ ಸ್ಥಳೀಯ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವಿದ್ಯಾರ್ಥಿಗಳಿಗೆ ‘ಪ್ರತಿಭಾ ಕಲೋತ್ಸವ’ ಕಾರ್ಯಕ್ರಮವು ದಿನಾಂಕ 08 ಜನವರಿ 2025ರಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆವರಣದಲ್ಲಿ ನಡೆಯಿತು.

    ಕಾರ್ಯಕ್ರಮವನ್ನು ಉದ್ಘಾಟಿಸಿದ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಆಯಕ್ತ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ ಮಾತನಾಡಿ “ಕಾಲ ಕಾಲಕ್ಕೆ  ಸರಿಯಾದ ವಿದ್ಯೆ ಬುದ್ಧಿಯ ಜೊತೆಗೆ ಹೃದಯಕ್ಕೆ ಸಂಸ್ಕಾರವನ್ನು ಒದಗಿಸುವ ಕೆಲಸ ಈ ‘ಪ್ರತಿಭಾ ಕಲೋತ್ಸವ’ದ  ಮೂಲಕ ಸಾಕಾರಗೊಳ್ಳಲಿದೆ. ದೇಶದಲ್ಲೆ ಮೊತ್ತ ಮೊದಲ ಬಾರಿಗೆ ಭಾರತ್ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ  ಪ್ರತಿಭಾ ಕಲೋತ್ಸವ ಹಮ್ಮಿಕೊಂಡಿರುವುದು ಖುಷಿ ನೀಡಿದೆ.  ಪಠ್ಯೇತರವಾಗಿ ಮನಸ್ಸನ್ನು ಕಟ್ಟುವ ಇಂತಹ ಕಾರ್ಯಕ್ರಮಗಳು ಎಲ್ಲಾ ಭಾಗಗಳಲ್ಲೂ ನಡೆಯಬೇಕು. ಆ ಮೂಲಕ ವಿದ್ಯಾರ್ಥಿಗಳಲ್ಲಿ ಭಾರತ್ ಸ್ಕೌಟ್ಸ್ ಗೈಡ್ಸ್ ಕುರಿತು ಇನ್ನಷ್ಟು ಜಾಗೃತಿ ಮೂಡಿ, ಸ್ಕೌಟ್ಸ್ ಗೈಡ್ಸ್ ಆಂದೋಲನ ದೇಶದಾದ್ಯಂತ ಮುಂಚೂಣಿಯಲ್ಲಿ ನಿಲ್ಲಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ಕೈಜೋಡಿಸಬೇಕು. ಈ ಕಾರ್ಯಕ್ರಮದಲ್ಲಿ  ಜಿಲ್ಲೆಯ 19 ಸ್ಥಳೀಯ ಸಂಸ್ಥೆಗಳಿಂದ 1400 ಪ್ರತಿನಿಧಿಗಳು ಆಗಮಿಸಿರುವುದು ನಾವು ಹಮ್ಮಿಕೊಂಡ ಕಾರ್ಯಕ್ರಮ ಸಫಲತೆಯನ್ನು ಕಾಣುವಂತೆ ಮಾಡಿದೆ. ಭಾರತ್ ಸ್ಕೌಟ್ಸ್ ಗೈಡ್ಸ್ ಪ್ರತಿ ವಿದ್ಯಾರ್ಥಿಯನ್ನು ಈ ದೇಶದ ಸಂಪತ್ತನ್ನಾಗಿ ಪರಿವರ್ತಿಸುವ ನೆಲೆಯಲ್ಲಿ ನಾವು ಕೆಲಸ ಕೈಗೊಳ್ಳಬೇಕು” ಎಂದರು.

    ಕಬ್ಸ್-ಬುಲ್‌ಬುಲ್ಸ್, ರೋವರ್-ರೇಂಜರ್ಸ್, ಸ್ಕೌಟ್ಸ್ – ಗೈಡ್ಸ್ ವಿದ್ಯಾರ್ಥಿಗಳಿಗೆ ಸಮೂಹ ಹಾಗೂ ವೈಯಕ್ತಿಕ ಸ್ಪರ್ಧೆಗಳ ವಿಭಾಗದಲ್ಲಿ ದೇಶಭಕ್ತಿ ಗೀತೆ, ಜಾನಪದ ಗೀತೆ, ಜಾನಪದ ನೃತ್ಯ, ಕಿರುಪ್ರಹಸನ, ಅಭಿನಯ ಗೀತೆ, ಕಥೆ ಹೇಳುವುದು,  ಚಿತ್ರಕಲೆ,  ಶಾಸ್ತ್ರೀಯ ಸಂಗೀತ, ಆಶುಭಾಷಣ,  ಪ್ರಬಂಧ, ಭಾವಗೀತೆ, ರಂಗೋಲಿ, ಮಿಮಿಕ್ರಿ, ಶಾಸ್ತ್ರೀಯ ನೃತ್ಯ  ಹಾಗೂ ಕ್ಲೇ ಮಾಡಲಿಂಗ್ ಸ್ಪರ್ಧೆಗಳು ನಡೆದವು.

    ಕಾರ್ಯಕ್ರಮದಲ್ಲಿ ಜಿಲ್ಲಾ ಗೈಡ್ಸ್ ಆಯುಕ್ತೆ ವಿಮಲಾ ರಂಗಯ್ಯ, ಕಾರ್ಯದರ್ಶಿ ಪ್ರತಿಮ್ ಕುಮಾರ್, ಜೊತೆ ಕಾರ್ಯದರ್ಶಿ ಜಯವಂತಿ ಸೋನ್ಸ್, ಜಿಲ್ಲಾ ಕೋಶಾಧಿಕಾರಿ ನವೀನಚಂದ್ರ ಅಂಬೂರಿ, ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್‌ರಾಜ್ ಕೆ., ಮೂಡುಬಿದಿರೆ  ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಭಾರತಿ ನಾಯಕ್ ಉಪಸ್ಥಿತರಿದ್ದರು.

    ಬಹುಮಾನಗಳು :

    ಕಬ್ಸ್-ಬುಲ್‌ಬುಲ್ಸ್  ವಿಭಾಗದಲ್ಲಿ ಆಳ್ವಾಸ್  ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಪ್ರಥಮ, ಎಸ್‌. ಡಿ. ಎಂ. ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ ದ್ವಿತೀಯ, ಬೆಥನಿ  ಆಂಗ್ಲ ಮಾಧ್ಯಮ ಶಾಲೆ ತೃತೀಯ ಸ್ಥಾನ ಪಡೆದರೆ,  ಸ್ಕೌಟ್ಸ್ – ಗೈಡ್ಸ್ ನಲ್ಲಿ  ಆಳ್ವಾಸ್ ಕನ್ನಡ  ಮಾಧ್ಯಮ ಶಾಲೆ ಪ್ರಥಮ, ಆಳ್ವಾಸ್  ಆಂಗ್ಲ ಮಾಧ್ಯಮ ಶಾಲೆ ಹಾಗೂ ಆಳ್ವಾಸ್ ಸೆಂಟ್ರಲ್ ಶಾಲೆ ದ್ವಿತೀಯ ಸ್ಥಾನ ಹಂಚಿಕೊಂಡವು. ರೋವರ್ – ರೇಂಜರ್ಸ್ ವಿಭಾಗದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜು ಪ್ರಥಮ, ಆಳ್ವಾಸ್ ಪದವಿ ಕಾಲೇಜು ದ್ವಿತೀಯ ಸ್ಥಾನ ಪಡೆದುಕೊಂಡಿತು.

    Classical Music Cultural dance drama drawing Literature Music sculpture
    Share. Facebook Twitter Pinterest LinkedIn Tumblr WhatsApp Email
    Previous Articleಶ್ರೀ ಮಹಾವೀರ ಪ. ಪೂ. ಕಾಲೇಜಿನಲ್ಲಿ ಉಪನ್ಯಾಸ
    Next Article ಪೆರ್ನಾಜೆಯಲ್ಲಿ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದಿಂದ ಯಕ್ಷಗಾನ ತಾಳಮದ್ದಳೆ
    roovari

    Add Comment Cancel Reply


    Related Posts

    ಲಿಂಗಾಯತ ಪ್ರಗತಿಶೀಲ ಸಂಘದ 2750ನೇ ‘ಶಿವಾನುಭವ’ದಲ್ಲಿ ‘ಸಂಗೀತ’ ಕ್ಷೇತ್ರದ ಉಪನ್ಯಾಸ

    June 24, 2025

    ‘ಶ್ರೀಮತಿ ಲಿಂಗಮ್ಮ ಮತ್ತು ಡಾ.ಚಿಕ್ಕಕೊಮಾರಿಗೌಡ ಹಾರೋಕೊಪ್ಪ’ ಪುರಸ್ಕಾರ ಪ್ರದಾನ

    June 24, 2025

    ಮನಶುದ್ದಿ ಮತ್ತು ಆತ್ಮ ಶುದ್ಧಿಗಾಗಿ ಸಂಗೀತ – ಖ್ಯಾತ ಛಾಯಾಚಿತ್ರ ಗ್ರಾಹಕ ಗಣೇಶ್ ಶೆಣೈ ಕುಂಬಳೆ

    June 24, 2025

    ಹಿರಿಯ ಸಾಹಿತಿ ಪ್ರಭಾ ಮಟಮಾರಿ ನಿಧನ

    June 24, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.