ಬೆಂಗಳೂರು : ಶ್ರೀ ಮುರಳಿಧರ ಸಂಗೀತ ನೃತ್ಯ ಮಹಾವಿದ್ಯಾಲಯ (ರಿ.) ಮೋಹನ ತರಂಗಿಣಿ ಸಂಗೀತ ಸಭಾ (ಕಲಾಪೋಷಕ ಪ್ರಶಸ್ತಿ ಪುರಸ್ಕೃತ ಸಂಸ್ಥೆ) ಹಾಗೂ ಪಲ್ಲವಿ ಗಾನಸಭಾ (ಲ.), ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ ‘ಪಲ್ಲವಿ ಕಾರ್ಯಾಗಾರ’ವು ದಿನಾಂಕ 10 ಆಗಸ್ಟ್ 2025ರ ಭಾನುವಾರದಿಂದ ದಿನಾಂಕ 28 ಸೆಪ್ಟೆಂಬರ್2025ರ ಭಾನುವಾರದವರೆಗೆ ಎಂಟು ವಾರಗಳು ಭಾನುವಾರ (ಬೆಳಗ್ಗೆ ಘಂಟೆ 10 ರಿಂದ 12:30 ರವರೆಗೆ) ನಡೆಯಲಿದೆ.
ಕೀರ್ತಿಶೇಷ ಲಯಯೋಗಿ ಪೂಜ್ಯ ವಿದ್ವಾನ್ ಶ್ರೀ ಪಲ್ಲವಿ ಎಸ್. ಚಂದ್ರಪ್ಪ ಇವರ ಸ್ಮರಣಾರ್ಥ ಆಯೋಜಿಸುವ ಈ ಕಾರ್ಯಕ್ರಮವನ್ನು ದಿನಾಂಕ 10 ಆಗಸ್ಟ್ 2025 ರಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾನಿಲಯ ಬಳ್ಳಾರಿ ಇಲ್ಲಿನ ಕುಲಪತಿಗಳಾದ ಡಾ. ಪ್ರೊ. ಎಂ. ಮುನಿರಾಜು ಉದ್ಘಾಟಿಸಲಿದ್ದು, ಪಲ್ಲವಿ ಗಾನಸಭಾ (ರಿ.) ಬೆಂಗಳೂರು ಇದರ ಅಧ್ಯಕ್ಷರಾದಕ ಗುರು ನಾದಬ್ರಹ್ಮ ವಿದ್ವಾನ್ ಶ್ರೀ ಪಲ್ಲವಿ ಸಿ. ವರದರಾಜ, ಮೋಹನ ತರಂಗಿಣಿ ಸಂಗೀತ ಸಭಾ ಬೆಂಗಳೂರು ಇದರ ಕಾರ್ಯದರ್ಶಿಗಳಾದ ಶ್ರೀಮತಿ ಲಕ್ಷ್ಮೀದೇವಿ ಮೋಹನಕುಮಾರ ಉಪಸ್ಥಿತರಿರುವರು. ಈ ಕಾರ್ಯಾಗಾರವು ಶ್ರೀ ಮುರಳೀಧರ ಸಂಗೀತ ನೃತ್ಯ ಮಹಾ ವಿದ್ಯಾಲಯ, ಉಲ್ಲಾಳ ಉಪನಗರ, ಅಂಚೆ ಕಚೇರಿ ಹಿಂಭಾಗ ಬೆಂಗಳೂರು ಇಲ್ಲಿ ನಡೆಯಲಿದೆ.
ವಿಶೇಷ ಸೂಚನೆ : ಶ್ರೀ ಮುರಳಿಧರ ಸಂಗೀತ ನೃತ್ಯ ಮಹಾವಿದ್ಯಾಲಯದ ವತಿಯಿಂದ ಬಡ ಮಕ್ಕಳಿಗೆ ಗುರುಕುಲ ಪದ್ಧತಿಯಲ್ಲಿ ಉಚಿತ ಊಟ, ವಸತಿ, ಸಂಗೀತ ಶಿಕ್ಷಣ ನೀಡಲಾಗುವುದು.

