ಶಿರಸಿ : ಅಖಿಲ ಭಾರತೀಯ ಸಾಹಿತ್ಯ ಪರಿಷದ್ (ನೋಂ) ಕರ್ನಾಟಕ ಇದರ ವತಿಯಿಂದ ‘ಪಂಪ ಕಂಡ ಭಾರತ’ ರಾಜ್ಯ ಸಾಹಿತ್ಯ ಗೋಷ್ಠಿಯನ್ನು ದಿನಾಂಕ 17 ನವೆಂಬರ್ 2024ರಂದು ಬೆಳಿಗ್ಗೆ 8-00 ಗಂಟೆಗೆ ಶಿರಸಿ ತಾಲೂಕು ಬನವಾಸಿಯ ವನವಾಸಿಕ ಯಾತ್ರಿ ನಿವಾಸದಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮವನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಇದರ ಉಪಾಧ್ಯಕ್ಷರಾದ ಶ್ರೀ ಎಸ್.ಜಿ. ಕೋಟಿ ಬಾಗಲಕೋಟ ಇವರು ಉದ್ಘಾಟನೆ ಮಾಡಲಿದ್ದು, ಕನ್ನಡ ವಿದ್ವಾಂಸರು ನಿವೃತ್ತ ಪ್ರಾಂಶುಪಾಲರಾದ ಡಾ. ವಿಷ್ಣು ಭಟ್ಟ ಪಾದೇಕಲ್ಲು ಇವರು ದಿಕ್ಸೂಚಿ ಮಾತುಗಳನ್ನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀ ಪುಟ್ಟು ಕುಲಕರ್ಣಿಯವರ ‘ಶ್ರೀ ಅರವಿಂದರ ಸಾವಿತ್ರಿ’ ಎಂಬ ಪುಸ್ತಕ ಲೋಕಾರ್ಪಣೆಗೊಳ್ಳಲಿದೆ.
ಸಭಾ ಕಾರ್ಯಕ್ರಮದ ಬಳಿಕ ಅವಧಿ 1ರಲ್ಲಿ ‘ಕರ್ಣಾರ್ಜುನ’ ಮಹಾರಾಣಿ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ. ಜಗದೀಶ ತುರಗನೂರು ಮೈಸೂರು ಇವರು ‘ವಿಕ್ರಮಾರ್ಜುನ ವಿಜಯದ ಕರ್ಣ’ ಮತ್ತು ಸಾಹಿತ್ಯ ವಿದ್ವಾಂಸರಾದ ಡಾ. ಶ್ರೀಧರ ಹೆಗಡೆ ಬದ್ರಸ್ ಧಾರವಾಡ ಇವರು ‘ಅರಿಕೇಸರಿ ಅರ್ಜುನನಾದ ಬಗೆ’ ಹಾಗೂ ಅವಧಿ 2ರಲ್ಲಿ ‘ಕೃಷ್ಣಾರ್ಜುನ’ ಕುಮಟಾದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಟಿ.ಜಿ. ಭಟ್ಟ ಇವರು ‘ಪಂಪನ ನಾಯಕನಾಗಿ ಅರ್ಜುನ’ ಮತ್ತು ವಿದ್ವಾಂಸರಾದ ಡಾ. ಪುಟ್ಟು ಕುಲಕರ್ಣಿ ಇವರು ‘ಪಂಪನ ಕೃಷ್ಣ’ ಎಂಬ ವಿಷಯದ ಬಗ್ಗೆ ವಿಚಾರ ಮಂಡನೆ ಮಾಡಲಿದ್ದಾರೆ. ಸಂಜೆ 4-00 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ನಿವೃತ್ತ ಅಪರ ನಿರ್ದೇಶಕರಾದ ಡಾ. ಟಿ.ಎನ್. ಪ್ರಭಾಕರ ಇವರು ಸಮಾರೋಪ ಮಾತುಗಳನ್ನಾಡಲಿದ್ದಾರೆ.