ಮೂಡುಬಿದಿರೆ : ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರ ವಿದ್ಯಾಗಿರಿ ಮೂಡುಬಿದಿರೆ ಇವರ ಸಹಯೋಗದಲ್ಲಿ ಬಳಿಪ ಪ್ರಸಾದ ಭಾಗವತ 50ರ ನೆನಪು ‘ಪಂಚಾಶತ್ ಸ್ಮರಣ್ – ಪಂಚಾಶತ್ ಸಮ್ಮಾನ್’ ಸರಣಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಮತ್ತು ಪ್ರಥಮ ಸನ್ಮಾನ ಕಾರ್ಯಕ್ರಮವನ್ನು ದಿನಾಂಕ 14 ಏಪ್ರಿಲ್ 2025ರಂದು ಅಪರಾಹ್ನ 3-00 ಗಂಟೆಗೆ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಭವನ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ ಇವರು ವಹಿಸಲಿದ್ದು, ಪಂಚಾಶತ್ ಸ್ಮರಣ್ – ಪಂಚಾಶತ್ ಸಮ್ಮಾನ್ ಕಾರ್ಯಕ್ರಮದ ಗೌರವ ಸಲಹೆಗಾರರಾದ ಕೆ. ಶ್ರೀಪತಿ ಭಟ್ ಇವರು ಉದ್ಘಾಟಿಸಲಿದ್ದಾರೆ. ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ ಸ್ಥಾಪಕರಾದ ಪಟ್ಲ ಸತೀಶ್ ಶೆಟ್ಟಿ ಇವರನ್ನು ಸನ್ಮಾನಿಸಲಾಗುವುದು.