ಶಿರಿಯಾರ : ಜೈಗಣೇಶ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಸಾಹೇಬರಕಟ್ಟೆ ಶಿರಿಯಾರ ಇವರ ನೂತನ ಕಟ್ಟಡ
“ಸೌಹಾರ್ದ ಸಿರಿ” ಉದ್ಘಾಟನಾ ಸಮಾರಂಭ ಪ್ರಯುಕ್ತ ಬಡಗುತಿಟ್ಟಿನ ಹೆಸರಾಂತ ಕಲಾವಿದರ ಕೂಡುವಿಕೆಯಲ್ಲಿ ‘ಪಂಚಸ್ವರ ಯಕ್ಷಗಾನ ವೈಭವ’ ಕಾರ್ಯಕ್ರಮವು ದಿನಾಂಕ 13 ಜುಲೈ 2025ರ ಭಾನುವಾರ ಶಿರಿಯಾರದ ಸಾಹೇಬರಕಟ್ಟೆಯಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಭಾಗವತರಾಗಿ ಸರ್ವಶ್ರೀ ಡಾ. ರವಿ ಕುಮಾರ್ ಸೂರಾಲು, ಪ್ರಸಾದ್ ಕುಮಾರ್ ಮೊಗೆಬೆಟ್ಟು, ಗಜೇಂದ್ರ ಶೆಟ್ಟಿ ಆಜ್ರೆ, ಮಧುಕರ್ ಮಡಾಮಕ್ಕಿ, ಮನೋಜ್ ಕಕ್ಕುಂಜೆ ಭಾಗವಹಿಸಲಿದ್ದು, ಇವರಿಗೆ ಮದ್ದಳೆಯಲ್ಲಿ ಆನಂದ ಭಟ್ ಪೆರ್ಡೂರು, ವಿಶ್ವಂಬರ ಅಲೈ ಹಾಗೂ ಚಂಡೆಯಲ್ಲಿ ಸುಜನ್ ಕುಮಾರ್ ಹಾಲಾಡಿ, ವಿಶ್ವೇಶ್ ಪೂಜಾರಿ ಬೈದಬೆಟ್ಟು ಸಹಕರಿಸಲಿದ್ದಾರೆ. ಸುಶಾಂತ್ ಶೆಟ್ಟಿ ಅಚ್ಚಾಡಿ ಕಾರ್ಯಕ್ರಮ ನಿರೂಪಿಸಲಿದ್ದಾರೆ.