ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವತಿಯಿಂದ ನಡೆಯುವ ಇಪತ್ತೊಂದನೇ ವರ್ಷದ ತಾಳಮದ್ದಳೆ ಸಪ್ತಾಹ ‘ಪಾಂಡವಾನಾಂ ಧನಂಜಯಃ’ ಇದರ ಉದ್ಘಾಟನಾ ಸಮಾರಂಭವು ದಿನಾಂಕ 07 ಜುಲೈ 2025ರ ಸೋಮವಾರದಂದು ಕಟೀಲಿನ ಸರಸ್ವತಿ ಸದನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಟೀಲು ದೇವಳದ ಅರ್ಚಕ ವೆಂಕಟರಮಣ ಆಸ್ರಣ್ಣ ಮಾತನಾಡಿ “ಕಟೀಲು ತಾಳಮದ್ದಳೆ ಸಪ್ತಾಹ ಪ್ರತಿ ವರ್ಷ ನಡೆಯುತ್ತಿದ್ದು, ಕಲಾಭಿಮಾನಿಗಳು ಹಾಗೂ ಭಕ್ತರು ಸಹಕಾರ ನೀಡುತ್ತ ಕಲೆಯನ್ನು ಪ್ರೋತ್ಸಾಹಿಸುತ್ತಿರುವುದು ಅಭಿನಂದನೀಯ” ಎಂದು ಹೇಳಿದರು.
ಕಟೀಲು ದೇವಳದ ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿಪ್ರಸಾದ ಆಸ್ರಣ್ಣ, ಈಶ್ವರ್ ಕಟೀಲು, ಲೋಕಯ್ಯ ಸಾಲಿಯಾನ್, ಯಕ್ಷಗಾನ ಕಲಾಪೋಷಕ ಪದ್ಮನಾಭ ಕಟೀಲು, ವಾಸುದೇವ ಆಚಾರ್ಯ ಕಿನ್ನಿಗೋಳಿ, ದಿನೇಶ್ ಶೆಟ್ಟಿ ಅಜಾರ್, ತಿಮ್ಮಪ್ಪ ಕೋಟ್ಯಾನ್, ಆದರ್ಶ್ ಶೆಟ್ಟಿ ಎಕ್ಕಾರು, ಕಿನ್ನಿಗೋಳಿ ರಾಮಮಂದಿರದ ರಾಜೇಶ್ ನಾಯಕ್, ಯಕ್ಷಧರ್ಮಬೋಧಿನೀ ಟ್ರಸ್ಟ್ ಇದರ ರವಿರಾಜ್ ಆಚಾರ್ಯ ಬಜಪೆ, ಪ್ರಭಾಕರ್ ರಾವ್ ದೊಡ್ಡಯ್ಯ ಮೂಲ್ಯ ಉಪಸ್ಥಿತರಿದ್ದರು. ವಾಸುದೇವ ಶಣೈ ನಿರೂಪಿಸಿದರು. ನಂತರ ಖ್ಯಾತ ಕಲಾವಿದರಿಂದ ಶರಸೇತು ಯತಿಪೂಜೆ ತಾಳಮದ್ದಳೆ ನಡೆಯಿತು. ಮುಂದಿನ ಭಾನುವಾರ ತಾಳಮದ್ದಲೆ ಸಪ್ತಾಹ ಸಮಾರೋಪಗೊಳ್ಳಲಿದೆ.