ಕಾಸರಗೋಡು : ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಕಾಸರಗೋಡು ಮತ್ತು ಕನ್ನಡ ಭವನ ಪ್ರಕಾಶನ ಇದರ ಸಾರಥ್ಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಹಾಗೂ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ (ರಿ.) ಇದರ ಸಹಯೋಗದಲ್ಲಿ ಕಾಸರಗೋಡಿನ ನುಳ್ಳಿಪ್ಪಾಡಿಯ ಪಿ.ಎಂ.ಎಸ್. ರಸ್ತೆಯಲ್ಲಿರುವ ಕನ್ನಡ ಭವನ ಸಮುಚ್ಚಯ ಸಭಾಂಗಣದಲ್ಲಿ ದಿನಾಂಕ 22-02-2024ರಂದು ಅಪರಾಹ್ನ 3 ಗಂಟೆಗೆ ‘ಶ್ರೀಮಾನ್ ಪಂಜೆ ಮಂಗೇಶರಾಯರ 150ನೇ ಜನ್ಮದಿನ ಸಂಭ್ರಮ – 2024’ ಕಾರ್ಯಕ್ರಮವು ನಡೆಯಲಿದೆ.
ಡಾ. ಪಿ. ಶ್ರೀಕೃಷ್ಣ ಭಟ್, ಡಾ. ಕೆ. ಕಮಲಾಕ್ಷ, ಡಾ. ಯು. ಮಹೇಶ್ವರಿ, ಡಾ. ರಾಧಾಕೃಷ್ಣ ಬೆಳ್ಳೂರು, ಪ್ರೊ. ನಾರಾಯಣ ಮೂಡಿತ್ತಾಯ, ಪ್ರೊ. ಎ. ಶ್ರೀನಾಥ್, ವಿ.ಬಿ. ಕುಳಮರ್ವ, ಅಡ್ವ ಥೋಮಸ್ ಡಿ’ಸೋಜಾ, ಪಿ.ವಿ. ಪ್ರದೀಪ್ ಕುಮಾರ್ ಮಂಗಳೂರು, ಡಾ. ಕೊಳ್ಚಪೆ ಗೋವಿಂದ ಭಟ್, ಎ.ಆರ್. ಸುಬ್ಬಯ್ಯಕಟ್ಟೆ, ಪ್ರದೀಪ್ ಬೇಕಲ್, ವಿಶಾಲಾಕ್ಷ ಪುತ್ರಕಳ, ಅರಿಬೈಲ್ ಗೋಪಾಲ ಶೆಟ್ಟಿ, ವೈ. ಸತ್ಯನಾರಾಯಣ ಮತ್ತು ಅನೇಕ ಗಣ್ಯರು ಪಂಜೆ ಮಂಗೇಶರಾಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ-ನಮನ ನುಡಿ ನಮನ ಸಲ್ಲಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಪಂಜೆಯವರ ಸಾಹಿತ್ಯ ಕೃತಿಗಳು- ಒಂದು ಅಧ್ಯಯನ 1986ರಲ್ಲಿ ಪಿಎಚ್.ಡಿ. ಮಾಡಿದ ಡಾ. ಡಿ. ಸದಾಶಿವ ಭಟ್ಟ ನಿಡ್ಪಳ್ಳಿ ವಿಶಾರದ ವಿದ್ವಾನ್, ಎಂ.ಎ.ಬಿ.ಎಡ್. ಪಿಎಚ್.ಡಿ. ಇವರಿಗೆ ಗೌರವಾರ್ಪಣೆ ಸನ್ಮಾನ ಮತ್ತು ಭಾರತ ಸರಕಾರದ ಕೇಂದ್ರ ಸಾಹಿತ್ಯ ಅಕಾಡೆಮಿಯ ನಿವೃತ್ತ ಉಪಕಾರ್ಯದರ್ಶಿ, ಜಾನಪದ ತಜ್ಞ ಹಾಗೂ ಲೇಖಕ ಡಾ. ಎಸ್.ಪಿ. ಮಹಾಲಿಂಗೇಶ್ವರ ಭಟ್ ಇವರಿಂದ ಪಂಜೆಯವರ ‘ಮಕ್ಕಳ ಸಾಹಿತ್ಯ ಮತ್ತು ಬದುಕು’ ಈ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನಡೆಯಲಿದೆ.