ಸವದತ್ತಿ : ಕೇಂದ್ರ ಸಂಸ್ಕೃತಿ ಸಚಿವಾಲಯ ನವ ದೆಹಲಿ ಭಾರತ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ಇವರ ಸಹಯೋಗದಲ್ಲಿ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ (ರಿ.) ಸವದತ್ತಿ ಇವರು ಪ್ರಸ್ತುತ ಪಡಿಸುವ ‘ಪರಸಗಡ ನಾಟಕೋತ್ಸವ 2026’ವನ್ನು ದಿನಾಂಕ 24 ಜನವರಿ 2026ರಿಂದ 02 ಫೆಬ್ರುವರಿ 2026ರವರೆಗೆ ಸಂಜೆ 7-00 ಗಂಟೆಗೆ ಸವದತ್ತಿ ಕೋಟೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 24 ಜನವರಿ 2026ರಂದು ಝಕೀರ ನದಾಫ ಇವರ ರಚನೆ ಮತ್ತು ನಿರ್ದೇಶನದಲ್ಲಿ ಸವದತ್ತಿಯ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ (ರಿ.) ತಂಡದವರಿಂದ ‘ಬಿರುಕು’, ದಿನಾಂಕ 25 ಜನವರಿ 2026ರಂದು ಝಕೀರ ನದಾಫ ಇವರ ರಚನೆ ಮತ್ತು ನಿರ್ದೇಶನದಲ್ಲಿ ಸವದತ್ತಿಯ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ (ರಿ.) ತಂಡದವರಿಂದ ‘ಮಾಂತ ಮಲ್ಲಯ್ಯ’, ದಿನಾಂಕ 26 ಜನವರಿ 2026ರಂದು ಡಾ. ಪ್ರಕಾಶ ಗರುಡ ಇವರ ರಂಗ ರೂಪ ಮತ್ತು ನಿರ್ದೇಶನದಲ್ಲಿ ಧಾರವಾಡದ ರಂಗಾಯಣ ತಂಡದವರಿಂದ ‘ಕಂದಗಲ್ಲರಿಗೆ ನಮಸ್ಕಾರ ಅರ್ಥಾತ್ ಕಂದಗಲ್ಲ ಭಾರತ’, ದಿನಾಂಕ 27 ಜನವರಿ 2026ರಂದು ಬಾಬಾಸಾಹೇಬ ಕಾಂಬಳೆ ನಿರ್ದೇಶನದಲ್ಲಿ ಬೆಳಗಾವಿಯ ವೇನಾಸಂ ತಂಡದವರಿಂದ ‘ಸಾಹೇಬರು ಸಾಕದ ನಾಯಿ’, ದಿನಾಂಕ 28 ಜನವರಿ 2026ರಂದು ವಿದ್ದು ಉಚ್ಚಿಲ ನಿರ್ದೇಶನದಲ್ಲಿ ಉಡುಪಿಯ ಸುಮನಸಾ ಕೊಡವೂರು ತಂಡದವರಿಂದ ‘ಈದಿ’, ದಿನಾಂಕ 29 ಜನವರಿ 2026ರಂದು ವಿದ್ದು ಉಚ್ಚಿಲ ನಿರ್ದೇಶನದಲ್ಲಿ ಉಡುಪಿಯ ಸುಮನಸಾ ಕೊಡವೂರು ತಂಡದವರಿಂದ ‘ಶಿಕಾರಿ’, ದಿನಾಂಕ 30 ಜನವರಿ 2026ರಂದು ಸಿಕಂದರ ದಂಡಿನ ನಿರ್ದೇಶನದಲ್ಲಿ ಧಾರವಾಡದ ರಂಗ ಸಾಮ್ರಾಟ ತಂಡದವರಿಂದ ‘ಅಪ್ಪಾ ಅವ್ವಾ.com’, ದಿನಾಂಕ 31 ಜನವರಿ 2026ರಂದು ಜಗದೀಶ ಆರ್. ಇವರ ಸಂಗೀತ ಮತ್ತು ನಿರ್ದೇಶನದಲ್ಲಿ ಸಾಣೇಹಳ್ಳಿ ಶಿವಸಂಚಾರ ತಂಡದವರಿಂದ ‘ಜಂಗಮದೆಡೆಗೆ’, ದಿನಾಂಕ 01 ಫೆಬ್ರುವರಿ 2026ರಂದು ವೈ.ಡಿ. ಬದಾಮಿ ಇವರ ನಿರ್ದೇಶನದಲ್ಲಿ ಸಾಣೇಹಳ್ಳಿ ಶಿವಸಂಚಾರ ತಂಡದವರಿಂದ ‘ಶಿವಯೋಗಿ ಸಿದ್ಧರಾಮೇಶ್ವರ’, ದಿನಾಂಕ 02 ಫೆಬ್ರುವರಿ 2026ರಂದು ಕೃಷ್ಣಮೂರ್ತಿ ಮೂಡಬಾಗಿಲು ಇವರ ರಚನೆ ಮತ್ತು ನಿರ್ದೇಶನದಲ್ಲಿ ಸಾಣೇಹಳ್ಳಿ ಶಿವಸಂಚಾರ ತಂಡದವರಿಂದ ‘ಕಳ್ಳರ ಸಂತೆ’ ನಾಟಕಗಳು ಪ್ರದರ್ಶನಗೊಳ್ಳಲಿದೆ.

