ಪಾಂಬೂರು : ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸುವ ಪಾಂಬೂರಿನ ಪರಿಚಯ ಪ್ರತಿಷ್ಠಾನವು ವಸಂತ ಕಲಾ ಸೌರಭ : ಬಹುಮುಖಿ ಸಾಂಸ್ಕೃತಿಕ ಉತ್ಸವವನ್ನು ಇದೇ ಮೇ 17ರಿಂದ ಮೇ 20ರವರೆಗೆ ಪಾಂಬೂರು ರಂಗಪರಿಚಯದಲ್ಲಿ ಆಯೋಜಿಸಿದೆ. ಮೇ 17ರಂದು ಬುಧವಾರ, ಖ್ಯಾತ ಸಾಹಿತಿ ಹಾಗೂ ಕವಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಕೊಂಕಣಿ ಭಾಷಾ ಸಂಚಾಲಕರಾಗಿರುವ ಮಾನ್ಯ ಮೆಲ್ವಿನ್ ರೊಡ್ರಿಗಸ್ ರವರೊಂದಿಗೆ ಮುಖಾಮುಖಿ, ವಾಚನ, ಗಾಯನ, ಕಥಾಪ್ರಸ್ತುತಿಯ ‘ಕವಿತಾರಂಗ್’ ಕಾರ್ಯ ಕ್ರಮ ಜರಗಲಿದೆ. ಖ್ಯಾತ ಸಿತಾರ್ ಕಲಾವಿದ ಉಸ್ತಾದ್ ರಫೀಕ್ ಖಾನ್ ರವರ ಸಂಗೀತ ನಿರ್ದೇಶನದಲ್ಲಿ ಖ್ಯಾತ ಕಲಾವಿದರು ಭಾಗವಹಿಸಲಿದ್ದಾರೆ. ಮೇ 18ರಂದು ಮಂಗಳೂರು ಸಂತ ಅಲೋಶಿಯಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ರಂಗಗೀತೆಗಳು ಹಾಗೂ ಹ್ಯಾಂಗ್‌ಆನ್ ನಾಟಕ ಪ್ರದರ್ಶನಗೊಳ್ಳಲಿದೆ. ಮೇ 19 ಮತ್ತು 20ರಂದು ಕನ್ನಡ ಸಿನೆಮಾ ರಂಗದ ಸೃಜನಶೀಲ ನಿರ್ದೇಶಕ ಮಂಸೋರೆಯವರ ‘ಮಂಸೋರೆ ಸಿನೆಹಬ್ಬ’ ಜರಗಲಿದೆ. ಮೇ 19ರಂದು ಇತ್ತೀಚೆಗೆ ಅತೀ ಚರ್ಚಿತ ‘19.20.21’ ಹಾಗೂ ಮೇ 20ರಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ‘ಹರಿವು’ ಕನ್ನಡ ಚಲನಚಿತ್ರ ಪ್ರದರ್ಶನಗೊಳ್ಳಲಿದೆ.
ಉಡುಪಿ ಕಥೊಲಿಕ್ ಧರ್ಮಪ್ರಾಂತ್ಯದ ಪ್ರಧಾನ ಗುರು ಮೊನ್ಸಿಂಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಪಾಂಬೂರು ಚರ್ಚಿನ ಗುರು ಫಾ. ಹೆನ್ರಿ ಮಸ್ಕರೇನಸ್, ತೊಟ್ಟಾಮ್ ಚರ್ಚಿನ ಧರ್ಮಗುರು ಫಾ. ಡೆನಿಸ್ ಡೇಸಾ, ದಾಯ್ಜಿವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ಆಡಳಿತ ನಿರ್ದೇಶಕರಾದ ಮಾನ್ಯ ವಾಲ್ಟರ್ ನಂದಳಿಕೆ, ಖ್ಯಾತ ನಾಟಕಕಾರ ಫಾ.ಡೊ. ಆಲ್ವಿನ್ ಸೆರಾವೊ, ಖ್ಯಾತ ವಕೀಲರಾದ ಮಾನ್ಯ ದಿನೇಶ್ ಹೆಗ್ಡೆ, ಉಳೆಪಾಡಿ, DYFI ರಾಜ್ಯಾಧ್ಯಕ್ಷ ಹಾಗೂ ಸಾಮಾಜಿಕ ಕಾರ್ಯೊಕರ್ತ ಮಾನ್ಯ ಮುನೀರ್ ಕಾಟಿಪಳ್ಳ, ಖ್ಯಾತ ಪತ್ರಕರ್ತರಾದ ಮಾನ್ಯ ನವೀನ್ ಸೂರಿಂಜೆ, ಮಾನ್ಯ ವಿಠಲ ಮಲೆಕುಡಿಯ, ಖ್ಯಾತ ರಂಗಕರ್ಮಿ ಹಾಗೂ ಚಲನಚಿತ್ರ ನಟ ಮಾನ್ಯ ಮಹಾದೇವ ಹಡಪದ ಹಾಗೂ ಸಿನೆಮಾ ನಿರ್ದೇಶಕ ಮನ್ಸೋರೆ ಹಾಗೂ ಇನ್ನಿತರ ಹಲವಾರು ಗಣ್ಯರು ಕಾರ್ಯಿಕ್ರಮದಲ್ಲಿ ಉಪಸ್ಥಿತಲಿರಲಿದ್ದಾರೆ. ಕಾರ್ಯಾಕ್ರಮಗಳಿಗೆಲ್ಲಾ ಉಚಿತ ಪ್ರವೇಶವಿದ್ದು ಕಲಾಸಕ್ತರಿಗೆ ಹಾರ್ದಿಕ ಸ್ವಾಗತ. ಎಲ್ಲಾ ಕಾರ್ಯಪಕ್ರಮಗಳು ಸಾಯಂಕಾಲ ಗಂಟೆ 6.30ಕ್ಕೆ ಸರಿಯಾಗಿ ಆರಂಭಗೊಳ್ಳಲಿವೆ.