Subscribe to Updates

    Get the latest creative news from FooBar about art, design and business.

    What's Hot

    ಭರತಾಂಜಲಿಯಿಂದ ಕಣ್ಮನ ತಣಿಸಿದ ರಂಗಪ್ರವೇಶ…ಗುರು ನಮನ..

    June 16, 2025

    ಪುಸ್ತಕ ಬಹುಮಾನಕ್ಕಾಗಿ ಜಾನಪದ ಕೃತಿ ಆಹ್ವಾನ | ಕೊನೆಯ ದಿನಾಂಕ ಜೂನ್ 30

    June 16, 2025

    “ನುಡಿಮುತ್ತು” ಕೃತಿಲೋಕಾರ್ಪಣೆ | ಜೂನ್ 18

    June 16, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬಂಗಾರ ಪರ್ಬ ಸರಣಿ ಕಾರ್ಯಕ್ರಮ-3 ‘ಪತ್ತನಾಜೆ–ಆಟಿ–ಸೋಣ’ | ಮೇ19ಕ್ಕೆ
    Literature

    ಬಂಗಾರ ಪರ್ಬ ಸರಣಿ ಕಾರ್ಯಕ್ರಮ-3 ‘ಪತ್ತನಾಜೆ–ಆಟಿ–ಸೋಣ’ | ಮೇ19ಕ್ಕೆ

    May 17, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ತುಳು ಕೂಟ (ರಿ.) ಕುಡ್ಲ ಆಯೋಜಿಸುವ ಬಂಗಾರ ಪರ್ಬ ಸರಣಿ ಕಾರ್ಯಕ್ರಮ -3 ಇದರ ಅಂಗವಾಗಿ ‘ತುಳುವೆರೆ ಪರ್ಬದ ಸಂಭ್ರಮ’ ‘ಪತ್ತನಾಜೆ–ಆಟಿ–ಸೋಣ’ (ಹತ್ತನಾವಧಿ–ಆಷಾಢ–ಶ್ರಾವಣ) ಕಾರ್ಯಕ್ರಮವು ದಿನಾಂಕ 19-05-2023ನೇ ಶುಕ್ರವಾರ ಸಂಜೆ 4-30ಕ್ಕೆ ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ.

    ತುಳು ಕೂಟದ ಅಧ್ಯಕ್ಷರಾದ ಶ್ರೀ ಬಿ. ದಾಮೋದರ ನಿಸರ್ಗ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಶ್ರೀ ಮಹತೋಭಾರ ಮಂಗಳಾದೇವಿ ದೇವಸ್ಥಾನದ ಶ್ರೀ ರಮಾನಾಥ ಹೆಗ್ಡೆ ಇವರು ದೀಪ ಪ್ರಜ್ವಲನೆ ಗೈದು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಸ್.ಆರ್.ಆರ್. ಮಸಾಲ ಇದರ ಮಾಲಕರಾದ ಶ್ರೀ ಶೈಲೇಂದ್ರ ವೈ. ಸುವರ್ಣ ಹಾಗೂ ಅಖಿಲ ಭಾರತ ತುಳು ಒಕ್ಕೂಟದ ಉಪಾಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮೀ ಶೆಟ್ಟಿ ಭಾಗವಹಿಸಲಿರುವರು.

    ಪತ್ತನಾಜೆ (ಹತ್ತನಾವಧಿ)ಯ ಬಗ್ಗೆ ತುಳು ವರ್ಲ್ಡ್ ಇದರ ನಿರ್ದೇಶಕರಾದ ಡಾ. ರಾಜೇಶ್ ಆಳ್ವ, ‘ಆಟಿ’ (ಆಷಾಢ)ಯ ಬಗ್ಗೆ ಮಂಗಳೂರು ಆಕಾಶವಾಣಿಯ ವಿಶ್ರಾಂತ ನಿರ್ದೇಶಕರಾದ ಡಾ. ವಸಂತ ಕುಮಾರ್ ಪೆರ್ಲ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಭಾಷಾ ಅಧ್ಯಯನ ಕೇಂದ್ರ, ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಇದರ ಸಂಯೋಜಕರಾದ ಡಾ. ಮಾಧವ ಎಂ.ಕೆ. ಇವರು ‘ಸೋಣ’ (ಶ್ರಾವಣ)ದ ಬಗ್ಗೆ ಪರಿಚಯ ಮಾಡಿ ಕೊಡಲಿದ್ದಾರೆ.

    ಈ ಕಾರ್ಯಕ್ರಮಕ್ಕೆ ಸರ್ವರಿಗೂ ತುಳು ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪ್ರೀತಿಯ ಸ್ವಾಗತ ಕೋರಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಪರಿಚಯ ಲೇಖನ | ‘ಭರತನೃತ್ಯ ಕಲಾ ಪ್ರವೀಣೆ’ ವಿದುಷಿ ಕು.ವೈಷ್ಣವಿ ವಿ ಪ್ರಭು
    Next Article ಕಲಾಭಿ ಥಿಯೇಟರ್ ವತಿಯಿಂದ ಬುನ್ರಾಕು ಗೊಂಬೆಯಾಟ ‘ಪುರ್ಸನ ಪುಗ್ಗೆ’ | ಮೇ 28ಕ್ಕೆ
    roovari

    Add Comment Cancel Reply


    Related Posts

    ಪುಸ್ತಕ ಬಹುಮಾನಕ್ಕಾಗಿ ಜಾನಪದ ಕೃತಿ ಆಹ್ವಾನ | ಕೊನೆಯ ದಿನಾಂಕ ಜೂನ್ 30

    June 16, 2025

    ಪುಸ್ತಕ ವಿಮರ್ಶೆ | ನಿರಂಜನರ ‘ಚಿರಸ್ಮರಣೆ’

    June 16, 2025

    ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಸುಪ್ತದೀಪ್ತಿಯವರ ನೂತನ ಕೃತಿಗಳ ಅನಾವರಣ | ಜೂನ್ 21

    June 16, 2025

    ಪಾರ್ವತಿ ಜಿ. ಐತಾಳರ ‘ಮಲೆಯಾಳ ಸಾಹಿತ್ಯದಲ್ಲಿ ಮಹಿಳಾ ಧ್ವನಿಗಳು’ ಕೃತಿ ಲೋಕಾರ್ಪಣೆ

    June 16, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.