ಸುರತ್ಕಲ್ : ಹರಿದಾಸ, ಯಕ್ಷಗಾನ ಅರ್ಥಧಾರಿ, ಸಂಘಟಕ ಹಾಗೂ ಶೇಣಿ ಪ್ರತಿಷ್ಠಾನದ ಕಾರ್ಯದರ್ಶಿಯಾದ ಪೇಜಾವರ ಶ್ರೀ ವಿಜಯಾನಂದ ರಾವ್ ದಿನಾಂಕ 19-11-2023 ರಂದು ಹೃದಯಾಘಾತದಿಂದ ನಿಧನರಾದರು. ಇವರಿಗೆ ಮಣಿ ಕೃಷ್ಣಸ್ವಾಮಿ ಅಕಾಡಮಿಯ ವತಿಯಿಂದ ದಿನಾಂಕ 01-12-2023ರ ಶುಕ್ರವಾರ ಸಂಜೆ ಗಂಟೆ 5.00ರಿಂದ ಸುರತ್ಕಲ್ಲಿನ ಕೆನರಾ ಬ್ಯಾಂಕ್ ಕ್ರಾಸ್ ರಸ್ತೆಯಲ್ಲಿರುವ ‘ಅನುಪಲ್ಲವಿ’ಯಲ್ಲಿ ಶ್ರದ್ಧಾಂಜಲಿ ಹಾಗೂ ನುಡಿ ನಮನ ಕಾರ್ಯಕ್ರಮ ನಡೆಯಲಿದೆ.
ಮಂಗಳೂರಿನ ಹರಿಕಥಾ ಪರಿಷತ್ ಇದರ ಅಧ್ಯಕ್ಷರಾದ ನ್ಯಾಯವಾದಿ ಕೂಡ್ಲು ಶ್ರೀ ಮಹಾಬಲ ಶೆಟ್ಟಿ ನುಡಿ ನಮನ ಸಲ್ಲಿಸಲಿರುವರು. ಬಳಿಕ ಶ್ರೀಯುತರ ಸ್ಮರಣಾರ್ಥ ‘ಸುಧನ್ವ ಮೋಕ್ಷ’ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಕಾರ್ಯಕ್ರಮದ ಹಿಮ್ಮೇಳದಲ್ಲಿ ಭಾಗವತರಾಗಿ ಸರ್ವ ಶ್ರೀ ಪುಂಡಿಕಾಯಿ ಗೋಪಾಲಕೃಷ್ಣ ಭಟ್, ಶ್ರೀಮತಿ ಶಾಲಿನಿ ಹೆಬ್ಬಾರ್, ಶ್ರೀ ಪಿ. ನಿತ್ಯಾನಂದ ರಾವ್ ಭಾಗವಹಿಸುವರು. ಮದ್ದಳೆಯಲ್ಲಿ ಶ್ರೀ ಕೆ. ರಾಮ ಹೊಳ್ಳ ಭಾಗವಹಿಸಲಿದ್ದು, ಅರ್ಥದಾರಿಗಳಾಗಿ ಸರ್ವ ಶ್ರೀ ಜಿ.ಕೆ. ಭಟ್, ಸೇರಾಜೆ ಸೀತಾರಾಮ ಭಟ್, ಪೇಜಾವರ ಸತ್ಯಾನಂದ ರಾವ್, ಶ್ರೀ ಚಂದ್ರಶೇಖರ ಕೋಡಿಪ್ಪಾಡಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಮಣಿ ಕೃಷ್ಣಸ್ವಾಮಿ ಅಕಾಡಮಿಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ ಎಲ್ಲರಿಗೂ ಸ್ವಾಗತ ಬಯಸಿದ್ದಾರೆ . ಹೆಚ್ಚಿನ ಮಾಹಿತಿಗಾಗಿ -9742792669

