ಪೆರ್ಡೂರು: ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ (ರಿ.) ಪೆರ್ಡೂರು ಹಾಗೂ ಇದರ ಆಶ್ರಯದಲ್ಲಿ ನಡೆಯುತ್ತಿರುವ ಸಂಗೀತ ಶಾಲೆಯ 11ನೇ ವಾರ್ಷಿಕೋತ್ಸವದ ಅಂಗವಾಗಿ ದಿನಾಂಕ 16-07-2023ರ ರವಿವಾರ ಬೆಳಗ್ಗೆ ಅವಿಭಜಿತ ಉಡುಪಿ ಹಾಗೂ ದ.ಕ. ಜಿಲ್ಲಾಮಟ್ಟದ ಆಹ್ವಾನಿತ ತಂಡಗಳ ಕುಣಿತ ಭಜನಾ ಸ್ಪರ್ಧೆಯು ಪೆರ್ಡೂರು ಸುಬ್ರಾಯ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಅಂದು ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಭಜನಾ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಹಿರಿಯರಾದ ಬಾಲು ಕೋಟ್ಯಾನ್ ಬೆಳ್ಳಂಪಳ್ಳಿ, ರಾಘವೇಂದ್ರ ನಾಯಕ್ ದೊಂಡೇರಂಗಡಿ ಹಾಗೂ ವಿಶ್ವ ದಾಖಲೆಯ ಈಜುಪಟು ಗಂಗಾಧರ ಜಿ. ಕಡೆಕಾರು ಹಾಗೂ ಪ್ರಸಿದ್ಧ ರಂಗ ಮತ್ತು ಚಲನಚಿತ್ರ ಕಲಾವಿದ ಸತೀಶ್ ಆಚಾರ್ಯ ಪೆರ್ಡೂರು ಅವರನ್ನು ಗೌರವಿಸಲಾಗುವುದು. ಸ್ಪರ್ಧೆಯ ವಿಜೇತ ತಂಡಗಳಿಗೆ ಕ್ರಮವಾಗಿ ಪ್ರಥಮ ಬಹುಮಾನ ರೂ 13,000, ದ್ವಿತೀಯ ರೂ.11,000 ಹಾಗೂ ತೃತೀಯ ರೂ.9,000 ಇದರೊಂದಿಗೆ ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ ಹಾಗೂ ವೈಯಕ್ತಿಕ ಬಹುಮಾನ ನೀಡಿ ಪುರಸ್ಕರಿಸಲಾಗುವುದು.
ಈ ಭಜನಾ ಸ್ಪರ್ಧೆಯಲ್ಲಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ನಾಳ ಬೆಳ್ತಂಗಡಿ., ಶ್ರೀ ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿ (ರಿ), ನೀರುಮಾರ್ಗ ಮಂಗಳೂರು., ಶ್ರೀ ಮಾಣಿ ಸಿದ್ಧಲಿಂಗೇಶ್ವರ ದೇವಸ್ಥಾನ, ಮಾವಾಡಿ ತ್ರಾಸಿ ಕುಂದಾಪುರ., ಶ್ರೀರಾಮ ಮಹಿಳಾ ಭಜನಾ ಮಂಡಳಿ, ಪಾಡಿಗಾರ, ಪೆರ್ಡೂರು., ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಸಿರಿಬೈಲು ಕಡ್ತಲ., ಬಾಲವಿಕಾಸ ಭಜನಾ ಮಂಡಳಿ, ಕುಳಾಯಿ ಹೊಸಬೆಟ್ಟು., ಶ್ರೀ ದುರ್ಗಾ ಕುಣಿತ ಭಜನಾ ಮಂಡಳಿ ಮುದರಂಗಡಿ, ಕಾಪು., ಜೈಶ್ರೀರಾಮ ಮಹಿಳಾ ಕುಣಿತ ಭಜನಾ ಮಂಡಳಿ ಕಂಚುಗೋಡು ಕುಂದಾಪುರ., ಶ್ರೀ ಶೇಷಶಯನ ಕುಣಿತ ಭಜನಾ ತಂಡ ಬೈಕಂಪಾಡಿ ಮಂಗಳೂರು., ಶ್ರೀ ಕಾಳಿಕಾಂಬಾ ಭಜನಾ ಮಂಡಳಿ ಕುಳಾಯಿ ಸುರತ್ಕಲ್., ಆದಿಶಕ್ತಿ ಕಾಳಿಕಾಂಬಾ ಭಜನಾ ಮಂಡಳಿ, ಎರ್ಲಪಾಡಿ ಕಾರ್ಕಳ., ಶ್ರೀ ಪಂಡರೀನಾಥ ಭಜನಾ ಮಂದಿರ (ರಿ) ಕನಕೋಡ, ಪಡುಕೆರೆ-ಉಡುಪಿ., ಶ್ರೀ ಗೋವಿಂದದಾಸ ವಿದ್ಯಾಸಂಸ್ಥೆ ಕುಣಿತ ಭಜನಾ ತಂಡ, ಸುರತ್ಕಲ್., ಶ್ರೀ ಉಮಾಮಹೇಶ್ವರ ಭಜನಾ ಮಂದಿರ, ಅಂಬಲಪಾಡಿ, ಉಡುಪಿ., ಶ್ರೀ ರಾಧಾಕೃಷ್ಣ ಭಜನಾ ಮಂಡಳಿ ನೀರ್ಕರೆ., ಶ್ರೀ ಆದಿನಾಥೇಶ್ವರ ಮಹಿಳಾ ಭಜನಾ ಮಂಡಳಿ ಮುನಿಯಾಲು. ಈ ಎಲ್ಲಾ ತಂಡಗಳು ಭಾಗವಹಿಸಲಿವೆ.