ಪೆರ್ಲ, ಕಾಸರಗೋಡು : ಪೆರ್ಲ ಕೃಷ್ಣ ಭಟ್ಟ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಆಯೋಜಿಸುವ ಪೆರ್ಲ ಕೃಷ್ಣ ಭಟ್ಟರ ಜನ್ಮಶತಮಾನೋತ್ಸವ ಕಾರ್ಯಕ್ರಮವಾದ ‘ಪೆರ್ಲ ನೂರರ ನೆನಪು’ ಸಮಾರಂಭವು ದಿನಾಂಕ 21 ಡಿಸೆಂಬರ್ 2024ರ ಶನಿವಾರದಂದು ಅಪರಾಹ್ನ ಗಂಟೆ 2.00 ರಿಂದ ಪೆರ್ಲದ ಶ್ರೀ ಭಾರತೀ ಸದನದಲ್ಲಿ ನಡೆಯಲಿದೆ.
ಕರ್ನಾಟಕ ಸರಕಾರದ ಮಾನವ ಹಕ್ಕುಗಳ ಆಯೋಗ ಇದರ ಅಧ್ಯಕ್ಷರಾದ ಡಾ. ಟಿ. ಶಾಮ್ ಭಟ್ ಐ. ಎ. ಎಸ್ (ನಿ) ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಶ್ರೀ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದಭಾರತೀ ಶ್ರೀಪಾದಂಗಳವರು ಆಶೀರ್ವಾಚನ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಇದರ ಅಖಿಲ ಭಾರತ ಕುಟುಂಬ ಪ್ರಬೋಧನ್ ಆಗಿರುವ ಶ್ರೀ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಸಂಸ್ಮರಣಾ ಭಾಷಣ ಮಾಡಲಿದ್ದು, ಬಹುಶ್ರುತ ವಿದ್ವಾಂಸರಾದ ಡಾ. ಪ್ರಭಾಕರ ಜೋಷಿ ಹಾಗೂ ಶ್ರೀಕ್ಷೇತ್ರ, ಕೊಲ್ಲೂರು ಇಲ್ಲಿನ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ಶ್ರೀ ಕೃಷ್ಣಪ್ರಸಾದ ಅಡ್ಯಂತಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಯಕ್ಷಗಾನ ಅರ್ಥಧಾರಿಗಳಾದ ಶ್ರೀ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಇವರಿಗೆ ‘ಪೆರ್ಲ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ‘ಕೃಷ್ಣಸಂಧಾನ’ ಕಥಾಭಾಗದ ಯಕ್ಷಗಾನ ತಾಳಮದ್ದಳೆ ನಡೆಯಲಿದ್ದು, ಹಿಮ್ಮೇಳದಲ್ಲಿ ಶ್ರೀ ಸತ್ಯನಾರಾಯಣ ಪುಣಿಂಚತ್ತಾಯ ಪೆರ್ಲ, ಶ್ರೀ ಆನಂದ ಪಡ್ರೆ, ಶ್ರೀ ಶ್ರೀಧರ ಪಡ್ರೆ, ಮಾ. ಸೌರಭ್ ಪುಣಿಂಚತ್ತಾಯ ಹಾಗೂ ಮುಮ್ಮೇಳದಲ್ಲಿ ಡಾ. ಪ್ರಭಾಕರ ಜೋಷಿ, ವಾಸುದೇವ ರಂಗಾ ಭಟ್ ಹಾಗೂ ರಾಮ ಭಟ್ ಕೋಟೆ ಭಾಗವಹಿಸಲಿದ್ದಾರೆ.

 
									 
					