ಮಹಾರಾಷ್ಟ್ರ : ಅಖಿಲ ಭಾರತ ತುಳು ಒಕ್ಕೂಟ ವತಿಯಿಂದ ದೀರ್ಘಕಾಲದಿಂದ ಉದ್ಯಮದೊಂದಿಗೆ ತುಳುಭಾಷೆ ಸಂಸ್ಕೃತಿ ಅಭಿವೃದ್ಧಿ ನೆಲೆಯಲ್ಲಿ ತುಳುನಾಡ ಸಂಘ ಸ್ಥಾಪಿಸಿ ತುಳು ಸಾಂಸ್ಕೃತಿಕ ಭವನದ ರೂವಾರಿಯಲ್ಲಿ ಒಬ್ಬರಾದ ಶ್ರೀನಿವಾಸ ಮಂಕುಡೆ ಅವರಿಗೆ ‘ಪೆರ್ಮೆದ ತುಳುವೆ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಮಹಾರಾಷ್ಟ್ರದ ಮೀರಜ್‌ನಲ್ಲಿ ದಿನಾಂಕ 22-01-2024ರಂದು ನಡೆಯಿತು.
ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ ಅವರು ಈ ಸಂದರ್ಭದಲ್ಲಿ ಮಾತನಾಡಿ “ಬಹಳ ವರ್ಷಗಳಿಂದ ಹೊರರಾಜ್ಯದಲ್ಲಿ ತುಳು ಭಾಷೆಗಾಗಿ ಶ್ಲಾಘನೀಯ ಕೆಲಸ ಮಾಡಿ, ತುಳುವರ ಅಭಿಮಾನ, ಪ್ರೀತಿಗೆ ಪಾತ್ರರಾದ ಮಂಕುಡೆಯವರಿಗೆ ಈ ಗೌರವ ಸಲ್ಲಲೇಬೇಕಿತ್ತು” ಎಂದರು.
ಪ್ರಧಾನ ಕಾರ್ಯದರ್ಶಿ ಮೂಲ್ಕಿ ಕರುಣಾಕರ ಶೆಟ್ಟಿ ಮಾತನಾಡಿ, “ಶ್ರೀನಿವಾಸ ಮಂಕುಡೆ ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಮಹಾರಾಷ್ಟ್ರ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೇಷ್ಠ ಕನ್ನಡಿಗ, ಕರ್ನಾಟಕ ದೇವಾಡಿಗ ಸಂಘದಿಂದ ಸಂಘಟನೆಗೊಬ್ಬ ಸರದಾರ ಹಾಗೂ ಮುಂಬೈ, ಸಂಘಟನೆಯಿಂದ ವರ್ಷದ ವ್ಯಕ್ತಿ ಮತ್ತಿತರ ಗೌರವ ಪ್ರಶಸ್ತಿ ಪಡೆದಿದ್ದಾರೆ” ಎಂದರು.
ಸಮ್ಮಾನ ಸ್ವೀಕರಿಸಿದ ಮಂಕುಡೆ ಅವರು “ಪ್ರಾಮಾಣಿಕ ಸೇವೆಯನ್ನು ಸಮಾಜ ಎಂದೂ ಮರೆಯುವುದಿಲ್ಲ ಎಂಬುದಕ್ಕೆ ಇವತ್ತು ಅಖಿಲ ಭಾರತ ತುಳು ಒಕ್ಕೂಟ ನೀಡಿದ ಪ್ರೀತಿ, ಗೌರವವೇ ಸಾಕ್ಷಿ” ಎಂದರು.
ಈ ಸಂದರ್ಭದಲ್ಲಿ ನಮ್ಮ ಕುಡ್ಲ ಕೂಟದ ಪ್ರತಿನಿಧಿ ಪ್ರದೀಪ್ ಆಳ್ವ ಕದ್ರಿ ಉಪಸ್ಥಿತರಿದ್ದರು. ಕದ್ರಿ ನವನೀತ್ ಶೆಟ್ಟಿ ಸಮ್ಮಾನ ಪತ್ರ ವಾಚಿಸಿ, ಜತೆ ಕಾರ್ಯದರ್ಶಿ ಪಿ.ಎ. ಪೂಜಾರಿ ಸ್ವಾಗತಿಸಿ, ಉಪಾಧ್ಯಕ್ಷ ತಾರನಾಥ ಶೆಟ್ಟಿ ಬೋಳಾರ್ ವಂದಿಸಿ, ರಾಜೇಶ್ ಆಳ್ವ ನಿರೂಪಿಸಿದರು.