ಪುತ್ತೂರು : ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ ಪುತ್ತೂರು ಇವರ ಆಶ್ರಯದಲ್ಲಿ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಉಜಿರೆ ಇವರ ವತಿಯಿಂದ ಹಾಸ್ಯಗಾರ ಪೆರುವಡಿ ನಾರಾಯಣ ಭಟ್ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಮತ್ತು ತಾಳಮದ್ದಳೆ ಸಪ್ತಾಹವನ್ನು ದಿನಾಂಕ 30 ಜೂನ್ 2025ರಿಂದ 06 ಜುಲೈ 2025ರವೆರೆಗೆ ಪ್ರತಿ ದಿನ ಸಂಜೆ 4-00 ಗಂಟೆಗೆ ಪುತ್ತೂರಿನ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಶ್ರೀ ಸುಕೃತೀಂದ್ರ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 30 ಜೂನ್ 2025ರಂದು ನಡೆಯಲಿರುವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಉದ್ಯಮಿ ಜಿ. ಬಲರಾಮ ಆಚಾರ್ಯ ಇವರು ವಹಿಸಲಿದ್ದು, ಹಿರಿಯ ಯಕ್ಷಗಾನ ಕಲಾವಿದರಾದ ದಶಾವತಾರಿ ಕೆ. ಗೋವಿಂದ ಭಟ್ ಇವರು ದೀಪ ಪ್ರಜ್ವಲನೆ ಮಾಡಲಿರುವರು. ಸಭಾ ಕಾರ್ಯಕ್ರಮದ ಬಳಿಕ ‘ತರಣಿಸೇನ ಕಾಳಗ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ದಿನಾಂಕ 01 ಜುಲೈ 2025ರಂದು ‘ಶಲ್ಯ ಸಾರಥ್ಯ’, ದಿನಾಂಕ 02 ಜುಲೈ 2025ರಂದು ‘ದಕ್ಷಾದ್ವರ’, ದಿನಾಂಕ 03 ಜುಲೈ 2025ರಂದು ‘ದಮಯಂತಿ ಪುನಃಸ್ವಯಂವರ’, ದಿನಾಂಕ 04 ಜುಲೈ 2025ರಂದು ‘ ಕೃಷ್ಣಾರ್ಜುನ ಕಾಳಗ’, ದಿನಾಂಕ 05 ಜುಲೈ 2025ರಂದು ‘ವಾಲಿ ವಧೆ’, ದಿನಾಂಕ 06 ಜುಲೈ 2025ರಂದು ‘ ಗುರುದಕ್ಷಿಣೆ’ ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ದಿನಾಂಕ 06 ಜುಲೈ 2025ರಂದು ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕರ್ಣಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಡಾ. ಟಿ. ಶ್ಯಾಮ್ ಭಟ್ ಇವರು ವಹಿಸಲಿದ್ದು, ಹೊನ್ನಾವರದ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ (ರಿ.) ಕೆರೆಮನೆ ಮತ್ತು ಹಿರಿಯ ಸ್ತ್ರೀವೇಷಧಾರಿ ಕೊಕ್ಕಡ ಈಶ್ವರ ಭಟ್ ಇವರಿಗೆ ‘ಕುರಿಯ ಪ್ರಶಸ್ತಿ’ ಪ್ರದಾನ ಹಾಗೂ ಬೆಂಗಳೂರಿನ ಕಲಾ ಪೋಷಕರಾದ ಆರ್.ಕೆ. ಭಟ್ ಇವರಿಗೆ ಕುರಿಯ ಸ್ಮೃತಿ ಗೌರವ ನೀಡಲಾಗುವುದು. ಹಿರಿಯ ಅರ್ಥಧಾರಿಗಳಾದ ವೆಂಕಟ್ರಾಮ ಭಟ್ ಸುಳ್ಯ ಇವರು ಪೆರುವಡಿ ಸಂಸ್ಮರಣೆ ಗೈಯ್ಯಲಿದ್ದಾರೆ.