ಶಿವಮೊಗ್ಗ : ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗ ಶಾಖೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಶಿವಮೊಗ್ಗ ಇವರ ಸಹಯೋಗದಲ್ಲಿ ‘ವೈದ್ಯ ಕವಿಗೋಷ್ಠಿ’ಯನ್ನು ದಿನಾಂಕ 16 ಫೆಬ್ರವರಿ 2025ರಂದು ಬೆಳಿಗ್ಗೆ 10-00 ಗಂಟೆಗೆ ಶಿವಮೊಗ್ಗದ ಐ.ಎಂ.ಎ. ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತು ಶಿವಮೊಗ್ಗ ಇದರ ಅಧ್ಯಕ್ಷರಾದ ಶ್ರೀ ಮಂಜುನಾಥ್ ಡಿ. ಇವರ ಅಧ್ಯಕ್ಷತೆ ನಡೆಯುವ ಈ ಕವಿಗೋಷ್ಠಿಯಲ್ಲಿ ವೈದ್ಯ ಕವಿಗಳಾದ ಡಾ. ಕೃಷ್ಣ ಎಸ್. ಭಟ್, ಡಾ. ಡೋ.ನಾ. ವೆಂಕಟೇಶ್ ರಾವ್, ಡಾ. ರಾಘವೇಂದ್ರ ವೈಲಾಯ, ಡಾ. ಗೀತಾಲಕ್ಷ್ಮೀ ಯು., ಡಾ. ಗುರುದತ್ತ್ ಕೆ.ಎನ್., ಡಾ. ವಿನಯ ಶ್ರೀನಿವಾಸ್, ಡಾ. ರಶ್ಮಿ ವೈದ್ಯ, ಡಾ. ಭಾರತಿ ಹೆಚ್.ಜಿ., ಡಾ. ನಿರಂಜನ್ ಪಿ.ಬಿ., ಡಾ. ಉಷಾ ರಮೇಶ್, ಮಾಸ್ಟರ್ ಶ್ರೇಯಸ್ ಎನ್., ಕುಮಾರಿ ಕೃತಜ್ಞಾ ಬೆಸೂರು ಇವರುಗಳು ಭಾಗವಹಿಸಲಿದ್ದಾರೆ.