ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮುಲ್ಕಿ ತಾಲೂಕು ಘಟಕವು ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಬೆಳೆಸುವ ಹಾಗೂ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಮೂಲ್ಕಿ ತಾಲೂಕಿನ ಪ್ರೌಢಶಾಲೆ, ಪದವೀಪೂರ್ವ ಕಾಲೇಜು ಹಾಗೂ ಪದವಿ ಕಾಲೇಜಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಕವನ ರಚನೆ ಹಾಗೂ ಕತೆ ರಚನೆಯ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ.
ಕವನ ರಚನೆ ಕಾರ್ಯಾಗಾರವು ದಿನಾಂಕ 28-10-2023ರ ಶನಿವಾರ ಬೆಳಿಗ್ಗೆ ಗಂಟೆ 9.30ರಿಂದ ಮಧ್ಯಾಹ್ನ 1.00 ಗಂಟೆಯ ವರೆಗೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವೀಪೂರ್ವ ಕಾಲೇಜಿನಲ್ಲಿ ನಡೆಯಲಿದ್ದು, ಶಿಕ್ಷಕಿ ಹಾಗೂ ಬರಹಗಾರ್ತಿಯಾದ ವಿಜಯಲಕ್ಷ್ಮೀ ಕಟೀಲು ನಡೆಸಿಕೊಡಲಿರುವರು. ಕವಿಗಳಾದ ವಿಲ್ಸನ್ ಕಟೀಲು ಮತ್ತು ಹೇಮಂತಕೃಷ್ಣ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾದಲಿದ್ದಾರೆ. ಕಟೀಲಿನ ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣ ಪ್ರೇರಣೆಯ ನುಡಿಗಳನ್ನಾಡಲಿದ್ದಾರೆ.
ಕತೆ ರಚನೆ ಕಾರ್ಯಾಗಾರ
ಕತೆ ರಚನೆ ಕಾರ್ಯಾಗಾರವು ದಿನಾಂಕ 04-11-2023ರ ಶನಿವಾರ ಬೆಳಿಗ್ಗೆ ಗಂಟೆ 9.30ರಿಂದ ಮಧ್ಯಾಹ್ನ 1.00 ಗಂಟೆಯ ವರೆಗೆ ಮೂಲ್ಕಿ ಸರಕಾರಿ ಪದವೀಪೂರ್ವ ಕಾಲೇಜು, ಕಾರ್ನಾಡು ಇಲ್ಲಿ ನಡೆಯಲಿದ್ದು, ಬರಹಗಾರರು ಮತ್ತು ಮಂಗಳೂರು ಆಕಾಶವಾಣಿ ಕಲಾವಿದರಾದ ದೇವು ಹನೆಹಳ್ಳಿ ಈ ಕಾರ್ಯಕ್ರಮವನ್ನು ನಡೆಸಿಕೊಡಲಿರುವರು. ಕಥೆಗಾರರಾದ ಶಕುಂತಲಾ ಭಟ್ ಹಳೆಯಂಗಡಿ
ಹಾಗೂ ಜೊಸ್ಸಿ ಪಿಂಟೋ ಕಿನ್ನಿಗೋಳಿ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾದಲಿದ್ದು, ಮೂಲ್ಕಿ ಸರಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲರಾದ ಡಾ. ವಾಸುದೇವ ಬೆಳ್ಳೆ ಪ್ರೇರಣೆಯ ನುಡಿಗಳನ್ನಾಡಲಿದ್ದಾರೆ.