ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಪ್ರಕಾಶನದ ‘ಕಾವ್ಯ ಕುಂಚ’ ಕವನ ಸಂಕಲನದ ಮೂರನೇ ಭಾಗ ಇತ್ತೀಚಿಗೆ ಲೋಕಾರ್ಪಣೆ ಆಗಿದ್ದು ನಾಲ್ಕನೇ ಭಾಗದ ಮುದ್ರಣಕ್ಕೆ ಸಂಸ್ಥೆಯು ಪೂರ್ಣ ಪ್ರಮಾಣದ ಸಿದ್ಧತೆ ಮಾಡಿಕೊಂಡಿದೆ ಎಂದು ‘ಕಾವ್ಯ ಕುಂಚ ಕವನ ಸಂಕಲನ’ದ ಪ್ರಧಾನ ಸಂಪಾದಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಸಾಹಿತ್ಯಾಸಕ್ತರು 15ರಿಂದ 20 ಸಾಲುಗಳ ಒಂದು ಕವನವನ್ನು ಶೀರ್ಷಿಕೆಯೊಂದಿಗೆ ಕನ್ನಡದಲ್ಲಿ ತಮ್ಮ ತಮ್ಮ ವ್ಯಾಟ್ಸಪ್‌ನಲ್ಲಿ ಟೈಪ್ ಮಾಡಿ ಕನ್ನಡದಲ್ಲಿ ತಮ್ಮ ಹೆಸರು ಪೂರ್ಣ ಪ್ರಮಾಣದ ವಿಳಾಸ ಚಿತ್ತಾಕರ್ಷಕವಾದ ಒಂದು ಭಾವಚಿತ್ರ ಹಾಗೂ ವ್ಯಾಟ್ಸಪ್ ಸಂಖ್ಯೆಯನ್ನು ಈ ಕೆಳಗಿನ ವ್ಯಾಟ್ಸಪ್ ಸಂಖ್ಯೆಗೆ ಕಳಿಸಬಹುದು. ವಿಷಯ ತಮ್ಮ ಆಯ್ಕೆ. ಕವನ ರಚಿಸಿ ಕಳಿಸುವ ದಿನಾಂಕ ವಿಸ್ತರಿಸಲಾಗಿದ್ದು, ಕೊನೆಯ ದಿನಾಂಕ 25-02-2024.
ಸಂಕಲನ ಮುದ್ರಣವಾದ ನಂತರ ಪುಸ್ತಕ ಲೋಕಾರ್ಪಣೆಯ ಸಮಾರಂಭದಲ್ಲಿ ರಾಜ್ಯಮಟ್ಟದ ಕವಿಗೋಷ್ಠಿಗೆ ಅವಕಾಶವಿದ್ದು, ಭಾಗವಹಿಸಿದವರಿಗೆ ಅಭಿನಂದನಾ ಪತ್ರ, ಕನ್ನಡ ತಾಯಿ ಭುವನೇಶ್ವರಿ ಸ್ಮರಣಿಕೆ ಹಾಗೂ ಹತ್ತು ಪುಸ್ತಕಗಳನ್ನು ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗೆ 9538732777 ಈ ವ್ಯಾಟ್ಸಪ್ ಸಂಖ್ಯೆಗೆ ಸಂಪರ್ಕಿಸಿರಿ ಎಂದು ಸಹ ಸಂಪಾದಕರಾದ ಪ. ವಿಶ್ವನಾಥ್ ತಿಳಿಸಿದ್ದಾರೆ.