ಬಾನಲ್ಲಿ ಕಪ್ಪು ಮೇಘಗಳ ಸಂಚಲನ
ಭುವಿಯಲ್ಲಿ ಮನ ಸೆಳೆವ ಮಯೂರ ನರ್ತನ
ಅಂಬರದಿ ವರ್ಷ ಧಾರೆ ಸುರಿವ ಸೂಚನೆ
ಮೇಘಗಳಿಗೆ ವರ್ಷಧಾರೆ ಸುರಿಸಲು ತವಕ
ಮೇಘಗಳ ಘರ್ಷಣೆಯ ಸಂಕೇತ ಗುಡುಗು
ಬರುವುದು ಭುವಿಗೆ ಮಿಂಚಿನಾ ಬೆಳಕು
ಮಾರುತವು ಜೊತೆಗೂಡೆ ಅಲ್ಲೋಲ ಕಲ್ಲೋಲ
ಗಿಡ ಮರಗಳೆಲ್ಲ ಭೂಮಿಗೆ ಶರಣು
ಮಳೆಯು ಬರಲು ಭೂದೇವಿಗೆ ಸಂತಸ
ಮೊದಲ ಮಳೆ ತಾಯಿ ಹಾಲ ಸಮಾನ
ಮಳೆ ಕೊಡುವುದು ಪ್ರಕೃತಿಗೆ ಜೀವ ದಾನ
ಅತಿಯಾದರೆ ಜನರ ಮಾರಣ ಹೋಮ
ಮೋಡಗಳಿಗೆ ಬಾನಲ್ಲಿ ಚೆಲ್ಲಾಟ
ಗಾಳಿಗೆ ಓಡಿ ಲೇಲುವ ಜಿಗಿದಾಟ
ಮೋಡ ಕರಗಿ ಮಳೆ ಬೀಳುವ ನೋಟ
ಮೇಘ ರಾಜನಿಗೆ ಸಂತೋಷದ ಕೂಟ
ಸುರವ ಮಳೆಗೆ ಇಳೆಗೆ ಸಂತೋಷ
ಮೇಘಗಳ ಘರ್ಷಣೆಗೆ ಜನರ ಆಕ್ರೋಷ
ಎಲ್ಲಿ ನೋಡಿದರೂ ಭೂಮಿ ಜಲಮಯ
ನೋಟವ ನೋಡಲು ನಯನ ಮನೋಹರ
ವಿಮಲಾ ಭಾಗ್ವತ್, ಸಿರ್ಸಿ ಉತ್ತರ ಕನ್ನಡ