ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ತೀರ್ಥಹಳ್ಳಿಯ ಇಂದಿರಾ ನಗರದ ಸ. ಹಿ. ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ಕಥೆ, ಕವನ ಹಾಗೂ ಪ್ರಬಂಧ ರಚನಾ ಕಮ್ಮಟವು ದಿನಾಂಕ 13-07-2024ರಂದು ಶಾಲಾ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕ. ಸಾ. ಪ. ಅಧ್ಯಕ್ಷ ಟಿ. ಕೆ. ರಮೇಶ್ ಶೆಟ್ಟಿ ಉದ್ಘಾಟಿಸಿದರು. ಸಮಾರಂಭದಲ್ಲಿ ಅತಿಥಿಗಳಾಗಿ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷೆಯಾದ ರೇಣುಕಾ ಹೆಗ್ಡೆ, ಕ. ಸಾ. ಪ. ಕಾರ್ಯದರ್ಶಿ ಗಾಯತ್ರಿ ಶೇಷಗಿರಿ, ಮುಖ್ಯೋಪಾಧ್ಯಾಯನಿ ಕುಸುಮಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹಾಬಲೇಶ್ ಹೆಗಡೆ ಮತ್ತು ಶಾಲೆಯ ಶಿಕ್ಷಕರು ಪಾಲ್ಗೊಂಡಿದ್ದರು.
ನಿವೃತ್ತಿ ಶಿಕ್ಷಕಿ ಸುಧೀಷ್ಣ ಕುಮಾರಿ, ಗಾಯತ್ರಿ ಶೇಷಗಿರಿ, ಶಿಕ್ಷಕಿ ಸುರೇಖಾ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಪರಿಣಾಮಕಾರಿಯಾಗಿ ಕಮ್ಮಟ ನಡೆಸಿಕೊಟ್ಟರು.


