ಮಂಗಳೂರು : ಕರಾವಳಿ ಲೇಖಕಿಯರ -ವಾಚಕಿಯರ ಸಂಘದಿಂದ ಬಿ. ಎಸ್. ಶಂಕರನಾರಾಯಣ ದತ್ತಿನಿಧಿ ಬಹುಮಾನಕ್ಕಾಗಿ ಮಂಗಳೂರು ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕಿಯರಿಂದ ಸ್ವರಚಿತ ಕವನಗಳನ್ನು ಆಹ್ವಾನಿಸಲಾಗಿದೆ. ಕವನದ ವಿಷಯ ‘ನನ್ನ ಅಪ್ಪ’. ಮೊದಲ ಮೂರು ವಿಜೇತರಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದು. ಸ್ಪರ್ಧಿಗಳ ಹೆಸರು, ಕಲಿಸುವ ಶಾಲೆಯ ಹೆಸರು ಮತ್ತು ವಿಳಾಸವನ್ನು ಪ್ರತ್ಯೇಕ ಹಾಳೆಯಲ್ಲಿ ಬರೆಯಬೇಕು. ಕೈಬರಹದ ಅಥವಾ ಡಿ. ಟಿ. ಪಿ. ಮಾಡಿದ ಕವಿತೆಯನ್ನು ಕರಾವಳಿ ಲೇಖಕಿಯರ ವಾಚಕಿಯರ ಸಂಘ, ಸಾಹಿತ್ಯ ಸದನ, ಉರ್ವಸ್ಟೋರ್, ಅಶೋಕನಗರ ಅಂಚೆ ಕಚೇರಿಯ ಬಳಿ, ಮಂಗಳೂರು -575006. ಈ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕು.
ಕವನಗಳು ತಲುಪಲು ಕೊನೆಯ ದಿನಾಂಕ 31 ಅಕ್ಟೋಬರ್ 2024.
Subscribe to Updates
Get the latest creative news from FooBar about art, design and business.
Next Article ದ. ಕೊರಿಯಾದ ಲೇಖಕಿ ಹ್ಯಾನ್ ಕಾಂಗ್ ಇವರಿಗೆ ಸಾಹಿತ್ಯ ನೊಬೆಲ್
Related Posts
Comments are closed.