ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಂಘ, ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಸಹಯೋಗದಲ್ಲಿ ನಾಡಿನ ಹೆಸರಾಂತ ಶಿಕ್ಷಣ ತಜ್ಞ, ಸಾಹಿತ್ಯ ಪ್ರೇಮಿ, ಸಂಗೀತ, ಲಲಿತ ಕಲೆಗಳ ಪೋಷಕರಾಗಿದ್ದ ಡಾ. ಬಿ. ಯಶೋವರ್ಮರವರ ನೆನಪಿಗಾಗಿ ಅವರ ವ್ಯಕ್ತಿತ್ವ, ಸಾಹಿತ್ಯ-ಸಂಸ್ಕೃತಿ ಪರಿಚಾರಿಕೆ ಕುರಿತಾಗಿ ರಾಜ್ಯ ಮಟ್ಟದ ಕವಿಗೋಷ್ಠಿಯೊಂದನ್ನು ದಿನಾಂಕ 05-12-2023ರಂದು ಮಂಗಳೂರಿನಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ಸದ್ರಿ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗಿದೆ.
ಕವನವು ಕನ್ನಡ/ತುಳು ಭಾಷೆಯಲ್ಲಿರಬಹುದಾಗಿದ್ದು, ವಾಚಿಸಲು 3 ನಿಮಿಷಗಳ ಕಾಲಾವಕಾಶ ಇದೆ. ಈ ಗೋಷ್ಠಿಯಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು, ಸಾಹಿತ್ಯಾಭಿಮಾನಿಗಳು ಯಾರು ಬೇಕಾದರೂ ಭಾಗವಹಿಸಬಹುದು. ತಾವು ರಚಿಸಿದ ಸ್ವ-ರಚಿತ ಕವನವನ್ನು ದಿನಾಂಕ 22-11-2023ರ ಮೊದಲು ಡಾ. ಎಂ.ಪಿ. ಶ್ರೀನಾಥ, ಜಿಲ್ಲಾಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಎಸ್.ಡಿ.ಎಂ. ಕಾಲೇಜು ಉಜಿರೆ-574 240 ಸಂಪರ್ಕ 9448558583 ಅಥವಾ ಡಾ. ಮಾಧವ ಎಂ.ಕೆ., ಮುಖ್ಯಸ್ಥರು, ಕನ್ನಡ ವಿಭಾಗ, ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು 9481270577 ಇವರಿಗೆ ಕಳುಹಿಸಿಕೊಡಬಹುದು. ಆಯ್ಕೆಯಾದವರ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಲಾಗುವುದು.