ಹರಿಹರ : ಪ್ರೇರಣ ಸಾಹಿತ್ಯ ಪರಿಷತ್ತು ಹರಿಹರ, ದಾವಣಗೆರೆ ಜಿಲ್ಲೆ ಇವರು ‘ಕನ್ನಡ ನುಡಿ ರತ್ನ’ ರಾಜ್ಯ ಮಟ್ಟದ ಕವನ ಸಂಕಲನಕ್ಕಾಗಿ ನಾಡಿನ ಕವಿಗಳಿಂದ ಸ್ವರಚಿತ ಕವನಗಳನ್ನು ಆಹ್ವಾನಿಸಿದ್ದು, ಆಸಕ್ತ ಕವಿಗಳು 16 ಸಾಲುಗಳಿಗೆ ಮೀರದಂತೆ ಕನ್ನಡ ನಾಡು, ನುಡಿ, ಸಂಸ್ಕೃತಿಗಳನ್ನು ಪ್ರತಿಬಿಂಬಿಸುವ ಸ್ವರಚಿತ ಒಂದು ಕವನವನ್ನು ಕಳುಹಿಸಬಹುದು.
ಆಯ್ಕೆಯಾದ ಕವಿಗಳ ಕವನಗಳನ್ನು ‘ಪ್ರೇರಣ ಕನ್ನಡ ನುಡಿ ರತ್ನ’ ಸಂಕಲನದಲ್ಲಿ ಕವಿಗಳ ಭಾವಚಿತ್ರ ಹಾಗೂ ಪರಿಚಯದೊಂದಿಗೆ ಪ್ರಕಟಿಸಲಾಗುವುದು. ಆಯ್ಕೆಯಾದ ಕವಿಗಳಿಗೆ ನವೆಂಬರ್ ತಿಂಗಳಿನಲ್ಲಿ ಹಮ್ಮಿಕೊಳ್ಳಲಾಗುವ ಅದ್ದೂರಿ ರಾಜ್ಯ ಮಟ್ಟದ ಕವಿ ಸಮ್ಮೇಳನಲ್ಲಿ ಕವನ ವಾಚನಕ್ಕೆ ಅವಕಾಶ ನೀಡಲಾಗುವುದು ಹಾಗೂ ಕವಿ ಸಮ್ಮೇಳನಕ್ಕೆ ಆಯ್ಕೆಯಾಗುವ ಕವಿಗಳಿಗೆ ‘ಪ್ರೇರಣ ಕನ್ನಡ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಆಸಕ್ತ ಕವಿಗಳು ದಿನಾಂಕ 25 ಆಗಸ್ಟ್ 2025ರ ಒಳಗಾಗಿ ತಮ್ಮ ಸ್ವರಚಿತ ಕವನವನ್ನು 9731395908 ಈ ಸಂಖ್ಯೆಗೆ ಕಳುಹಿಸಬಹುದು. ಆಯ್ಕೆಯಾದ ಕವಿಗಳಿಗೆ ಮಾತ್ರ ತಿಳಿಸಲಾಗುವುದು. ಆಯ್ಕೆ ಪ್ರಕ್ರಿಯೆಯಲ್ಲಿ ಸಂಸ್ಥೆಯ ತೀರ್ಮಾನವೇ ಅಂತಿಮ.