ಕೋಟ : ಕೋಟದ ಸುವಿಕಾ ಸಾಂಸ್ಕೃತಿಕ ಸಂಘಟನೆಯು 2025ರ ಜನವರಿಯಲ್ಲಿ ನಡೆಯುವ ಕಾಲೇಜು ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನಕ್ಕಾಗಿ ಉಡುಪಿ ಜಿಲ್ಲಾ ಪದವಿ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಕವನಗಳನ್ನು ಆಹ್ವಾನಿಸುತ್ತಿದೆ.
ಆಯ್ಕೆಯಾದ ಕವಿತೆಗಳನ್ನು ಸಮ್ಮೇಳನದ ಕವಿಗೋಷ್ಠಿಯಲ್ಲಿ ವಾಚಿಸಲು ಅವಕಾಶವಿದ್ದು, ಸಂಘಟನೆ ಪ್ರಕಟಿಸಲಿರುವ ಕವನ ಸಂಕಲನದಲ್ಲಿ ಬಳಸಿಕೊಳ್ಳಲಾಗುವುದು. ಒಬ್ಬರು ತಮ್ಮ ಸ್ವರಚಿತ ಒಂದು ಕವಿತೆಯನ್ನು ಮಾತ್ರ ಕಳುಹಿಸಬಹುದಾಗಿದೆ. ಕವಿತೆಗಳು ‘A4’ ಅಳತೆಯ ಹಾಳೆಯಲ್ಲಿ ಟೈಪ್ ಮಾಡಿದ್ದು, ತಮ್ಮ ಕಿರು ಪರಿಚಯ, ಅನುಕೂಲದ ಅಂಚೆ ವಿಳಾಸ, ವಾಟ್ಸಾಪ್ ಸಂಖ್ಯೆ ಮತ್ತು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ “ಸುಜಯೀಂದ್ರ ಹಂದೆ ಎಚ್., ಸುವಿಕಾ ಸಾಂಸ್ಕೃತಿಕ ಸಂಘಟನೆ ಕೋಟ, ಪಟೇಲರ ಮನೆ, ಕೋಟ ಅಂಚೆ, ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ- 576221 ಇವರಿಗೆ ಸಾಮಾನ್ಯ ಅಂಚೆಯಲ್ಲಿ 20 ಡಿಸೆಂಬರ್ 2024ರ ಒಳಗಾಗಿ ಕಳುಹಿಸಿಕೊಡಬಹುದು.
ಹೆಚ್ಚಿನ ಮಾಹಿತಿಗೆ 9845414622 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಸಂಘಟನೆಯ ಕಾರ್ಯದರ್ಶಿ ವಿನಿತಾ ಸುಜಯೀಂದ್ರ ಹಂದೆ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.