ಕಾಸರಗೋಡು : ಶ್ರೀಮತ್ ಎಡನೀರು ಮಠಾದೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳಿಂದ ಲಾಂಚನ ಬಿಡುಗಡೆಗೊಳಿಸಿ, ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಇವರಿಂದ ವಿದ್ಯುಕ್ತವಾಗಿ ಕನ್ನಡ ಧ್ವಜ ನೀಡಿ ಉದ್ಘಾಟನೆಗೊಂಡ ಕಾಸರಗೋಡು ಕನ್ನಡ ಭವನ ರೂವಾರಿಯಾದ ಡಾ. ವಾಮನ್ ರಾವ್ ಬೇಕಲ್-ಸಂಧ್ಯಾರಾಣಿ ಟೀಚರ್ ಸ್ಥಾಪಿಸಿದ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕಾಸರಗೋಡಿನಲ್ಲಿ ಸಾಹಿತಿ, ಪತ್ರಕರ್ತ ಶ್ರೀ ವಿರಾಜ್ ಅಡೂರ್ ಅಧ್ಯಕ್ಷರಾಗಿ ಸಮಿತಿ ವಿಸ್ತರಿಸಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾರ್ಯ ಪ್ರವೃತ್ತವಾಗಿದೆ. ಕರ್ನಾಟಕ ರಾಜ್ಯದಲ್ಲಿ ಪರಿಷತ್ತಿನ ಘಟಕ ಸ್ಥಾಪಿಸಿ ಕನ್ನಡ ಪರ ಚಟುವಟಿಕೆಗಳನ್ನು ವಿಸ್ತರಿಸುವ ಉದ್ದೇಶದಿಂದ ಇದೀಗ ಕೊಡಗು ಜಿಲ್ಲೆಯಲ್ಲಿ ಕನ್ನಡ ಚು. ಸಾ. ಪ. ಘಟಕವನ್ನು ಸ್ಥಾಪಿಸಿದೆ. ಕನ್ನಡ ಭವನದ ಕೊಡಗು ಜಿಲ್ಲಾ ಅಧ್ಯಕ್ಷರಾದ ಬೊಳ್ಳಜಿರ ಬಿ. ಅಯ್ಯಪ್ಪ ಇವರು ಸೋಮವಾರಪೇಟೆಯ ರುಬೀನಾ ಎಂ.ಎ. ಇವರ ನಾಮನಿರ್ದೇಶನ ಮಾಡಿದರು. ಕೊಡಗು ಕನ್ನಡ ಭವನ ಪ್ರದಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು ಅನುಮೋದಿಸಿದರು. ಸರ್ವಾನುಮತಿಯೊಂದಿಗೆ ಜಿಲ್ಲಾಧ್ಯಕ್ಷೆಯಾಗಿ ಆಯ್ಕೆಯಾದ ಕವಯತ್ರಿ ರುಬೀನಾ ಎಂ.ಎ. ಇವರು, ಉಪಾಧ್ಯಕ್ಷರಾಗಿ ಪೆರಿಯಂಡ ಯಶೋಧ, ಕಾರ್ಯದರ್ಶಿಯಾಗಿ ಬೊಟ್ಟೋಳಂಡ ನಿವ್ಯಾ ಕಾವೇರಮ್ಮ, ಕೋಶಾಧಿಕಾರಿಯಾಗಿ ಚಂದನ್ ನಂದರಬೆಟ್ಟು, ಕಾರ್ಯಕಾರೀ ಸಮಿತಿ ಸದಸ್ಯರಾಗಿ ಕರವಂಡ ಸೀಮಾ ಗಣಪತಿ, ಪಳಂಗೀಯಂಡ ಶರತ್ ಬೋಪಣ್ಣ, ಕಿಶೋರ್ ರೈ ಕತ್ತಲೆಕಾಡು, ಸಂಕೇತ್ ಕೆ.ಎ., ಹೇಮಂತ್ ಪರೇರಾ. ಪಂದ್ಯoಡ ರೇಣುಕಾ ಸೋಮಯ್ಯ, ಅಮ್ಮಾಟಂಡ ವಿಂದ್ಯಾ ದೇವಯ್ಯ, ಮೊಣ್ಣಂಡ ವಿನು ಕಾರ್ಯಪ್ಪ, ಕಾಣತಂಡ ಭವ್ಯ ದೇವಯ್ಯ, ಉಡುವೆರ ರೇಖಾ ರಘು ಇವರನ್ನು ಆಯ್ಕೆ ಮಾಡಿ ಸಮಿತಿಯನ್ನು ರಚಿಸಿದ್ದಾರೆ. ಮಾರ್ಚ್ ಕೊನೆಯ ವಾರದಲ್ಲಿ ಕೊಡಗು ಜಿಲ್ಲೆಯ ಮಡಿಕೇರಿ ಕೇಂದ್ರದಲ್ಲಿ ಅದ್ದೂರಿ ಪದಗ್ರಹಣ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಗೌರವ ಅಧ್ಯಕ್ಷರಾದ ಬೊಳ್ಳಜಿರ ಬಿ. ಅಯ್ಯಪ್ಪ ಹಾಗೂ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಸ್ಥಾಪಕ ಸಂಚಾಲಕರಾದ ಡಾ. ವಾಮನ್ ರಾವ್ ಬೇಕಲ್ ಸಂಯುಕ್ತವಾಗಿ ತಿಳಿಸಿದ್ದಾರೆ.