ಗದಗ : ದಿ. ಶ್ರೀ ಶಿವಯೋಗೆಪ್ಪ ರುದ್ರಪ್ಪ ಹುರಕಡ್ಲಿಯವರ 9ನೇ ಪುಣ್ಯಸ್ಮರಣೋತ್ಸವ ನಿಮಿತ್ತ ಕುಮಾರಿ ಭಾಗ್ಯಶ್ರೀ ಶಿ. ಹುರಕಡ್ಲಿಯವರ ‘ಮಿಡಿದ ಹೃದಯ’ ಚೊಚ್ಚಲ ಕವನ ಸಂಕಲನ ಲೋಕಾರ್ಪಣೆ ಸಮಾರಂಭವನ್ನು ದಿನಾಂಕ 29 ಜೂನ್ 2025ರಂದು ಬೆಳಗ್ಗೆ 10-30 ಗಂಟೆಗೆ ಗದಗದ ಅಬ್ದುಲ್ ಕಲಾಂ ಶಾದಿ ಮಹಲ್ ನಲ್ಲಿ ಆಯೋಜಿಸಲಾಗಿದೆ.
ಈ ಸಮಾರಂಭದ ಅಧ್ಯಕ್ಷತೆಯನ್ನು ಸಾಹಿತಿ ನಾಗಲೇಖರವರು ವಹಿಸಿದ್ದು, ಕ.ಸಾ.ಪ. ತಾಲೂಕು ಘಟಕದ ಅಧ್ಯಕ್ಷರಾದ ಡಾ. ರಶ್ಮಿ ಅಂಗಡಿ ಇವರು ಉದ್ಘಾಟನೆ ಮಾಡಲಿದ್ದಾರೆ. ಎಸ್.ಎಮ್.ಇ. ಸೊಸೈಟಿ ಚೇರ್ ಮನ್ನರಾದ ಅಹ್ಮದಹುಸೇನ ಖಾಜಿ ಇವರು ಕೃತಿ ಲೋಕಾರ್ಪಣೆ ಮಾಡಲಿದ್ದು, ಕನ್ನಡ ಉಪನ್ಯಾಸಕರಾದ ಪ್ರೊ. ಎಚ್.ಎಸ್. ದಳವಾಯಿ ಇವರು ಕೃತಿ ಪರಿಚಯ ಮಾಡಲಿದ್ದಾರೆ.